ಸಿಡಿಲು: 10 ಕುರಿಗಳು ಸಾವು

ವಿಜಯಪುರ, ಏ.25:ಸಿಡಿಲು ಬಡಿದು 10 ಕುರಿಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ಚಿಕ್ಕರೂಗಿ ಗ್ರಾಮದಲ್ಲಿ ನಡೆದಿದೆ.
ಸುಬ್ಬರಾಯ ನಾಟೀಕಾರ ಎಂಬುವರಿಗೆ ಸೇರಿದ 10 ಕುರಿಗಳು ಮೃತಪಟ್ಟಿವೆ.
ಜಮೀನಿನಲ್ಲಿ ಕುರಿಗಳು ಮೇಯಲು ಹೋದಾಗ ಸಿಡಿಲು ಬಡಿದು 10 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
ದೇವರಹಿಪ್ಪರಗಿ ಪೆÇಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.