ಸಿಡಿಲು ಬಡಿದು 2 ಹಸುಗಳ ಸಾವು

ಕಮಲನಗರ:ಏ.16: ತಾಲ್ಲೂಕಿನ ಠಾಣಾಕುಶನೂರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಬೆಳಕುಣಿ(ಸಿ) ಗ್ರಾಮದಲ್ಲಿ ಮಂಗಳವಾರ ರೈತ ಬಸವರಾಜ ರಾಮಶೆಟ್ಟಿ ಗಂದಗೆ ಅವರಿಗೆ ಸೇರಿದ ಎರಡು ಆಕಳುಗಳು ಸಿಡಿಲು ಬಡಿದು ಸಾವನ್ನಪ್ಪಿವೆ.

ಆಕಳುಗಳ ಮೌಲ್ಯ ₹70 ಸಾವಿರ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಠಾಣಾಕುಶನೂರು ಪೊಲೀಸ್ ಠಾಣೆ ಪಿಎಸ್‍ಐ ಕಿರಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಮೃತರಾವ ವಾಘಮಾರೆ, ಧೂಳಪ್ಪ ಗಂದಗೆ, ಸಂಜೀವಕುಮಾರ ಮುಗಟೆ, ಸತೀಷ ಗಂದಗೆ, ಶಿವಕುಮಾರ ಗಂದಗೆ, ಕರಬಸ್ಸಪ್ಪ ಸೋರಳ್ಳೆ, ರವಿ ಇದ್ದರು. ಠಾಣಾಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಕುಣಿ (ಸಿ) ಗ್ರಾಮದ ಮತ್ತೊಬ್ಬ ರೈತ ರಾಜೇಂದ್ರ ಕಲ್ಲಪ್ಪ ಅವರ ಒಂದು ಆಕಳು ಕೂಡ ಸಿಡಿಲು ಬಡಿದು ಸಾವನ್ನಪ್ಪಿದೆ.