ಸಿಡಿಲು ಬಡಿದು 15 ಕುರಿಗಳ ಸಾವು

ವಿಜಯಪುರ: ಎ.8:ಸಿಡಿಲು ಬಡಿದು 15 ಕುರಿಗಳು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಮಸೂತಿ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ತಳೇವಾಡ ಗ್ರಾಮದ ಚಂದ್ರಶೇಖರ ಮುಕನ್ನನವರ ಎಂಬ ವ್ಯಕ್ತಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ಕುರಿ ಮಾಲೀಕ ಚಂದ್ರಶೇಖರನಿಗೆ ಗಂಭೀರ ಗಾಯ ವಾಗಿದ್ದು, ಗಾಯಾಳು ಚಂದ್ರಶೇಖರ ವಿಜಯಪುರ ಖಾಸಗಿ ಆಸ್ಪತ್ರೆ ದಾಖಲು ಮಾಡಲಾಗಿದೆ. ಸುಮಾರು 2 ಲಕ್ಷ ದಷ್ಟು ನಷ್ಟ ಆಗಿದೆ. ಕೂಡಗಿ ಎನ್‍ಟಿಪಿಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.