ಸಿಡಿಲು ಬಡಿದು ವ್ಯಕ್ತಿ ಸಾವು

ಸೇಡಂ, ಮಾ,19: ಜಮೀನಿನಲ್ಲಿ ಕುರಿ ಕಾಯುವಾಗ ಸಿಡಿಲು ಬಡಿದು ಶಾಂತಕುಮಾರ್ ಹಾಗೂ ಎರಡು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ . ತಾಲೂಕಿನ ಮುಧೋಳ ವ್ಯಾಪ್ತಿಯಲ್ಲಿ ಬರುವ ಕಿಷ್ಟಪೂರ ಗ್ರಾಮದಲ್ಲಿ ನಿನ್ನೆ ಸಂಜೆ 5 ಗಂಟೆಗೆ ನಡೆದಿದೆ .
ಕಿಷ್ಟಪುರ ಗ್ರಾಮದ ಬಳಿ ಜಮೀನಿನಲ್ಲಿ ಶಾಂತಕುಮಾರ್ ಕುರಿ ಕಾಯುವ ಸಮಯದಲ್ಲಿ ಗಾಳಿ ಮಳೆ ಬರಲು ಶುರುವಾದ ಕೂಡಲೇ ಅಲ್ಲೇ ಇದ್ದ ಬಾರಿ ಗಿಡದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಶಾಂತಕುಮಾರ್ (30) ಸ್ಥಳದಲ್ಲೇ ಸಾವಿಗೀಡಾಗಿದ್ದು, ಎರಡು ಕುರಿಗಳು ಕೂಡ ಸಾವನ್ನಪ್ಪಿವೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಸಹಾಯಕ ನೊಂದಣಾಧಿಕಾರಿ ಶಿವಾನಂದ ಮೆತ್ರಿ ಹಾಗೂ ಮುಧೋಳ ಪೆÇೀಲಿಸ್ ಠಾಣೆ ಪಿಐ ದೌಲತ್ ಎನ್ ಎಎಸ್ ಆಯ್ ನಾಗೇಂದ್ರಪ್ಪ ಓಪಿ ಯಾನಾಗುಂದಿ ರೈಟರ್ ಶಿವುಕುಮಾರ ಹಾಗೂ ಪೆÇೀಲಿಸ್ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದು ಮುಧೋಳ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.