ಸಿಡಿಲು ಬಡಿದು ವಾಸದ ಮನಗೆ ಹಾನಿ

Oplus_0

ಸಂಜೆವಾಣಿ ನ್ಯೂಸ್
ಕೆ.ಆರ್.ಪೇಟೆ.ಏ.21: ಬಾರಿ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆಯನ್ನು ರಂಧ್ರದಂತೆ ಕೊರೆದಿದ್ದು ನೆಲ, ಗೋಡೆಗಳು, ವಿದ್ಯುತ್ ಸಂಪರ್ಕ,ಮನೆಯಲ್ಲಿನ ಟಿ.ವಿ,ಫ್ರಿಡ್ಜ್,ಯು.ಪಿ.ಎಸ್, ಮೇಲ್ಛಾವಣಿ ಹಾನಿಯಾಗಿದ್ದು ಮನೆಯಲ್ಲಿದ್ದ ಎರಡು ಪುಟ್ಟ ಮಕ್ಕಳು ಸೇರಿ ಎಂಟು ಮಂದಿ ಪವಾಡಸದೃಶವಾಗಿ ಪಾರಾಗಿರುವ ಘಟನೆ ತಾಲ್ಲೂಕಿನ ಶೀಳನೆರೆ ಹೋಬಳಿಯ ನಾಡಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕೆಂಪಯ್ಯ ರವರ ಪುತ್ರ ಕೆಂಪಯ್ಯ ಎಂಬುವವರ ವಾಸದ ಮನೆ ಸಿಡಿಲ ಬಡಿತಕ್ಕೆ ಒಳಗಾಗಿದ್ದು ಶುಕ್ರವಾರ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಮಳೆ ಬರುತ್ತಿದ್ದ ಕಾರಣ ನಮ್ಮ ಮನೆಯಲ್ಲಿ ಮಕ್ಕಳು ಪತ್ನಿ ಸೇರಿದಂತೆ ಎಂಟು ಮಂದಿ ಮಾತನಾಡುತ್ತಾ ಕುಳಿತಿದ್ದ ವೇಳೆ ಜೋರಾದ ಶಬ್ದ ನಮ್ಮ ಮನೆಗೆ ಅಪ್ಪಳಿಸಿತು ಭೀಕರ ಶಬ್ದದ ಪ್ರಖರತೆಗೆ ನಾವು ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ.
ಕೆಲವು ನಿಮಿಷಗಳ ನಂತರ ನಮ್ಮ ಮನೆಯ ಗೋಡೆ ಬಿರುಕು ಕಾಣಿಸಿಕೊಂಡು ವಿದ್ಯುತ್ ಬಲ್ಪ್ಗಳು, ಬೋರ್ಡು, ವೈರಿಂಗ್ ಎಲ್ಲವೂ ಶರ್ಟ್ ಸಕ್ರ್ಯೂಟ್ ಆದವು. ನಂತರ ಅಕ್ಕಪಕ್ಕದ ಮನೆಯವರು ಗ್ರಾಮಸ್ಥರು ಆಗಮಿಸಿ ನಮ್ಮನ್ನು ಸಂತೈಸಿದರು.
ಮನೆ ಭಾಗಶಃ ಹಾನಿಯಾಗಿದೆ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರಕ್ಕೂ ಸಿಡಿಲು ಬಡಿದಿದೆ. ಸಿಡಿಲಿನ ಬಡಿತದ ಪರಿಣಾಮ ಗ್ರಾಮದ ಐವತ್ತಕ್ಕೂ ಹೆಚ್ಚು ಮನೆಗಳ ಟಿವಿ, ಫ್ರಿಡ್ಜ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟುಹೋಗಿವೆ. ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಕಟ್ ಆಗಿದೆ ಎಂದು ಕೆಂಪಯ್ಯ ತಿಳಿಸಿದ್ದಾರೆ.