ಅಫಜಲಪುರ,ಮೇ.30-ತಾಲ್ಲೂಕಿನ ರೇವೂರ (ಬಿ) ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.
ಮಾಳಪ್ಪ ದತ್ತಪ್ಪ ಪೂಜಾರಿ (32) ಮೃತಪಟ್ಟ ರೈತ.
ಗ್ರಾಮದ ಸಮೀಪಕ್ಕೆ ಹೊಂದಿಕೊಂಡಿರುವ ನಸರೋದ್ದೀನ್ ದರ್ಗಾ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೇವೂರ (ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.