ಸಿಡಿಲು ಬಡಿದು ಯುವಕ ಸಾವು

ಕಲಬುರಗಿ,ಮೇ.8:ಅಫಜಲಪುರ ತಾಲೂಕಿನ ಮಣೂರ ಗ್ರಾಮದ ಅಜಯ ಚಂದ್ರಶೇಖರ ಹೊಸೂರ(23) ಸಿಡಿಲು ಬಡಿದು ಸಾವನ್ನಪ್ಪಿದ ದಾರುಣ ಘಟನೆ ಇಂದು ಸಾಯಂಕಾಲ 5 ಗಂಟೆಗೆ ಜರುಗಿದೆ.

ಸಂಜೆ ಮಳೆ ಬರುವ ವೇಳೆ ಯುವಕ ತನ್ನ ಜಮೀನಿನ ಮರದ ಹತ್ತಿರ ನಿಂತಾಗ ಈ ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.

ಘಟನೆಯು ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.