ಸಿಡಿಲು ಬಡಿದು ಮೃತ : ಪರಿಹಾರ ವಿತರಣೆ

ದೇವದುರ್ಗ.ಸೆ.12- ಸಮೀಪದ ಕರಿಗುಡ್ಡ ಹಾಗೂ ಖಾನಾಪುರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಗಳಿಗೆ ಶಾಸಕ ಕೆ.ಶಿವನಗೌಡ ನಾಯಕ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ತಲಾ 5 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದರು.
ಕರಿಗುಡ್ಡದ ವೆಂಕಟೇಶ ಭೀಮನಗೌಡ ಹಾಗೂ ಖಾನಾಪುರದ ನಾಗಪ್ಪ ಸೋನೆಕಲ್ ಸಿಡಿಲು ಬಡಿದು ಮೃತಪಟ್ಟಿದ್ದರು. ಮೃತರ ಕುಟುಂಬಗಳಿಗೆ ಆಸರೆಯಾಗಲು ಸರ್ಕಾರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಸಹಾಯ ಧನ ನೀಡುತ್ತಿದ್ದು, ಪಾಲಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಧುರಾಜ್ ಯಾಳಗಿ, ಸಿಐಪಿ ಆರ್.ಎಂ.ನದಾಫ್, ಪಿಎಸ್‌ಐ ಕೆ.ರಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಆರ್.ಇಂದಿರಾ, ಮುಖಂಡರಾದ ಪ್ರಕಾಶ ಪಾಟೀಲ್ ಜೇರಬಂಡಿ, ದೇವೇಂದ್ರಪ್ಪ ನಾಯಕ, ಶಾಸಕರ ಆಪ್ತ ಸಹಾಯಕ ಮಂಜುನಾಥ ಸೇರಿದಂತೆ ಇತರರು ಇತರರಿದ್ದರು.