ಸಿಡಿಲು ಬಡಿದು ಮೃತ ಪಟ್ಟವರ ಕುಟುಂಬಕ್ಕೆ 5 ಲಕ್ಷ ಪರಿಹಾರ

ಅಫಜಲಪುರ:ಜೂ.10: ತಾಲೂಕಿನ ಬಡದಾಳ ಗ್ರಾಮದ ರೈತ ಭೋಜರಾಜ್ ಅತನೂರೆ ಅವರು ಸಿಡಿಲು ಬಡಿದು ಮೃತ ಪಟ್ಟಿದ್ದರು. ಅವರ ಕುಟುಂಬಕ್ಕೆ ಶಾಸಕ ಎಂ.ವೈ ಪಾಟೀಲ್ ಅವರು ಸರ್ಕಾರದಿಂದ ಬಂದ 5 ಲಕ್ಷ ಪರಿಹಾರ ಧನ ಚೆಕ್ ಮೃತ ರೈತನ ಮಗ ಬಸವರಾಜ ಅತನೂರೆ ಅವರಿಗೆ ಹಸ್ತಾಂತರಿಸಿದರು.
ಬಡದಾಳ ಗ್ರಾ.ಪಂ ಅದ್ಯಕ್ಷ ಅಮೃತ ಮಾತಾರಿ, ಸದಸ್ಯರಾದ ಖಾಜಪ್ಪ ಸಿಂಗೆ, ರೂಪವಾನ್ ಪ್ಯಾಟಿ, ನಾಗೇಶ ಭತ್ತಾ, ಭಾಗಣ್ಣ ಚಾಂಬಾರ, ಮುಖಂಡರಾದ ಮಲ್ಲಿನಾಥ ಅತನೂರೆ, ಮರೇಪ್ಪ ಸಿಂಗೆ, ಉದಯ ಪಾಟೀಲ್, ಶ್ರೀಶೈಲ್ ಬಿಜಾಪುರೆ, ಪ್ರಕಾಶ ಕಲಬುರ್ಗಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾ.ಪಂ ಇಒ ಅಬ್ದುಲ್ ನಬಿ ಇದ್ದರು.