ಸಿಡಿಲು ಬಡಿದು ಮಹಿಳೆ ಸಾವು

ವಿಜಯಪುರ ಆ 4: ಸಿಡಿಲು ಬಡಿದು ಮಹಿಳೆಯೊಬ್ಬಳು ಸಾವಿಗೀಡಾದ ಘಟನೆ ದೇವರಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದ ಹೊಲದಲ್ಲಿ ನಡೆದಿದೆ.ಈ ವೇಳೆ ಒಂದು ಎಮ್ಮೆಗೂ ಸಿಡಿಲು ತಾಗಿದ್ದು, ಎಮ್ಮೆ ಕೂಡ ಮೃತಪಟ್ಟಿದೆ
ಹುಣಶ್ಯಾಳ ಗ್ರಾಮದ ಜೈನಾಬಿ ನಜೀರಅಹ್ಮದ ಸಿಪಾಯಿ (55) ಸಿಡಿಲು ಬಡಿದು ಮೃತಪಟ್ಟ ಮಹಿಳೆ.ಜೈನಾಬಿ ಸಿಪಾಯಿ, ಹೊಲದಲ್ಲಿ ಕಸ ತೆಗೆಯುವ ವೇಳೆ ಮಳೆ ಬಂದಿದ್ದು, ಮರದ ಕೆಳಗೆ ನಿಂತಿರುವ ವೇಳೆಯಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾಳೆ.ಕಲಕೇರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.