ಸಿಡಿಲು ಬಡಿದು ಮಹಿಳೆ ಸಾವು; ಇಬ್ಬರಿಗೆ ಗಾಯ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.09 : ತಾಲ್ಲೂಕಿನ ಹೊನ್ನರಹಳ್ಳಿ ಶ್ರೀಧರಗಡ್ಡೆ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲಿನ ಹೊಡೆತಕ್ಕೆ ಕೃಷಿ ಕಾರ್ಮಿಕ ಮಹಿಳೆ ಮೃತಪಟ್ಟಿದ್ದು, ಓರ್ವ ಮಹಿಳೆ
ಹಾಗೂ ಬೆಳಗಾವಿಯ ಕುರಿಗಾಹಿ ಮಹಿಳೆ ಗಾಯಗೊಂಡಿರುವ ಘಟನೆ ನಡೆದಿದೆ.
 ತಾಲ್ಲೂಕಿನ ಹೊನ್ನರಹಳ್ಳಿ ಗ್ರಾಮದ ಭತ್ತದ ಜಮೀನಿನಲ್ಲಿ ಹುಲ್ಲು ಕೂಡಿಸಲು ಹೋದಾಗ ಕುಡುದರಹಾಳ ಗ್ರಾಮದ ಮಂಗಮ್ಮ ಗಂಡ ಗೋಪಾಲ(40ವರ್ಷ)ಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾ- ರೆ. ಜತೆಯಲ್ಲಿದ್ದ ಹನುಮಂತಮ್ಮ(30) ಗಂಡ ರಮೇಶ ಗಾಯಗೊಂಡಿದ್ದಾರೆ.
 ಶ್ರೀಧರಗಡ್ಡೆ ಗ್ರಾಮದಲ್ಲಿ ಬೆಳಗಾವಿ ಕುರಿಗಾಯಿ ಮನಗಿನಿ ಸಿದ್ದು ಕಿಲ್ಲಾರಿ (58ವರ್ಷ) ಎಡಗೈಗೆ ಸಿಡಿಲು ಬಡಿದ ಪರಿಣಾಮ ಅಂಗಿ ಸುಟ್ಟು, ಮೈಮೇಲೆ ಬೊಬ್ಬೆಗಳಾಗಿವೆ. ಗಾಯಾಳುಗಳು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.