ಸಿಡಿಲು ಬಡಿದು ತೆಂಗಿನ ಮರ ನಾಶ

ಕಡಬ: ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡು ತೆಂಗಿನ ಮರ ನಾಶವಾದ ಘಟನೆ ಕಡಬ ತಾಲೂಕಿನ ಕೊಲ ಗ್ರಾಮದ ಕಡೆಂಬಿಕಲ್ಲು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಸಂಜೆಯ ಹೊತ್ತಿಗೆ ಈ ಭಾಗದಲ್ಲಿ ಸಿಡಿಲಬ್ಬರದ ಮಳೆಯಾಗಿದ್ದು. ಈ ಸಂದರ್ಭ ಕಡೆಂಬಿಕಲ್ಲು ಜನಾದನ ಗೌಡ ಎಂಬವರಿಗೆ ಸೇರಿದ ತೋಟದ ತೆಂಗಿನ ಮರಕ್ಕೆ ಸಿಡಿಲು ಬಿದ್ದಿದೆ. ಜೋರು ಮಳೆಯಾಗುತ್ತಿದ್ದರೂ ತೆಂಗಿನ ಮರದ ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಬಳಿಕ ಬೆಂಕಿ ನಂದಿಹೊದರೂ ತೆಂಗಿನ ಮರ ಮಾತ್ರ ಸುಟ್ಟು ಕರಕಲಾಗಿ ನಾಶವಾಗಿದೆ. ಇದೇ ವೇಳೆ ಪಕ್ಕದ ಮರವೊಂದಕ್ಕೂ ಸಿಡಿಲು ಬಡಿದಿದೆ. ಕೊಲ ಸೇರಿದಂತೆ ಕಡಬ ತಾಲೂಕಿನಲ್ಲಿ ಗುಡುಗು ಸಿಡಿಲು ಹಾಗೂ ಗಾಳಿಯೊಂದಿಗೆ ಮಳೆಯಾಗಿದೆ.