ಸಿಡಿಲು ಬಡಿದು ಜೋಳದ ಬಣವೆ ಭಸ್ಮ

ಕಮಲನಗರ:ಮೇ.3: ತಾಲ್ಲೂಕಿನ ಹಂದಿಕೇರಾ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ಬಿಳಿ ಜೋಳದ ಬಣವೆ ಬೆಂಕಿಗೆ ಆಹುತಿಯಾಗಿದೆ.

ರೈತ ಕಾಶಿರಾಮ ಕೇರಬಾ ಬಿರಾದಾರ ಹೊಲದಲ್ಲಿ ಕೂಡಿಟ್ಟ ಬಿಳಿ ಜೋಳ ಬಣವೆ ಅಂದಾಜು ₹25 ಸಾವಿರ ಮೌಲ್ಯದ ಜೋಳದ ಕಣಕಿಗೆ ಬೆಂಕಿ ಹತ್ತಿ ಕರಲಾಗಿದೆ ಎಂದು ಚಿಮೆಗಾಂವ್ ಗ್ರಾ.ಪಂ ಅಧ್ಯಕ್ಷ ಅನೀಲಕುಮಾರ ಬಿರಾದಾರ ತಿಳಿಸಿದರು.ಡ

ಚಿಮೆಗಾಂವ್ ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಮನೆಯೊಂದರ ಹಿಂಬದಿ ಗೋಡೆ ಕುಸಿದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರಾಧ ಅನಿಲ ಬಿರಾದಾರ, ಸಂತೋಷ ಜಾಧವ, ಅಂಕುಶ ವಾಡೀಕರ್ ಒತ್ತಾಯಿಸಿದ್ದಾರೆ.

ಅಗ್ನಿಶಾಮಕ ಠಾಣೆಗೆ ಒತ್ತಾಯ: ಸಾರ್ವಜನಿಕರ ಹಿತದೃಷ್ಟಿಯಿಂದ ಕಮಲನಗರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿದ್ದಲ್ಲಿ, ಅನುಕೂಲವಾಗುತ್ತದೆ ಎಂದು ಅಂಕುಶ ತಿಳಿಸಿದ್ದಾರ.