ಸಿಡಿಲು ಬಡಿದು ಗುಡಿಯ ಶಿಖರಕ್ಕೆ ಹಾನಿ

ಸೇಡಂ, ಮೇ,09: ತಾಲೂಕಿನ ಬೆನಕನಹಳ್ಳಿ ಗ್ರಾಮದ ಶ್ರೀ ಚಂದಣೇಶ್ವರ ದೇವಾಲಯದ ಶಿಖರಕ್ಕೆ ನಿನ್ನೆ ತಡರಾತ್ರಿ ಸುಮಾರು 12 ಗಂಟೆ 10 ನಿಮಿಷಕ್ಕೆ ಸಿಡಿಲು ಬಡಿದು ಗುಡಿಯ ಶಿಖರದ ಚಿದ್ರವಾಗಿದ್ದು ಮತ್ತು ಗುಡಿಯ ಕಳಸಕ್ಕೆ ಬಡಿದು ಬಿರುಕು ಬಿಟ್ಟಿದೆ.ಅನೇಕ ಗ್ರಾಮಸ್ಥರು ದೇವಾಲಯದಲ್ಲಿ ಮಲಗಿದ್ದರು ಸದ್ಯ ದೇವರ ಕೃಪೆಯಿಂದ ಯಾವುದೇ ಅನಾವುತ ಸಂಭವಿಸಿಲ್ಲ ಎಂದು ಗ್ರಾಮದ ಯುವ ಮುಖಂಡರಾದ ಶಿವಲಿಂಗರೆಡ್ಡಿ ಪಾಟೀಲ್
ಸಂಜೆವಾಣಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.


ತಾಲೂಕಾ ಆಡಳಿತವು ಬೆನಕನಹಳ್ಳಿ ಗ್ರಾಮಕ್ಕೆ ಬಂದು ಶ್ರೀ ಚಂದಣೇಶ್ವರ ದೇವಾಲಯಕ್ಕೆ ಹಾನಿ ಸಂಭವಿಸಿದ್ದು ಪರಿಶೀಲಿಸಿ ಸರ್ಕಾರದಿಂದ ಸಹಾಯಧನಕ್ಕೆ ಶಿಫಾರಸ್ಸು ಮಾಡಬೇಕಿದೆ.
ಶಿವಲಿಂಗರೆಡ್ಡಿ ಪಾಟೀಲ್ ಗ್ರಾಮದ ಯುವ ಮುಖಂಡರು
ಬೆನಕನಹಳ್ಳಿ