ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವು


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.11:  ತಾಲೂಕಿನ ಮುಕ್ಕುಂಪಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಒರ್ವ ವ್ಯಕ್ತಿ ಮೃತ ಪಟ್ಟಿರುವ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.
ಮೃತ ವ್ಯಕ್ತಿ ಮುಕ್ಕುಂಪಿ ಗ್ರಾಮದ ಯಮನೂರಪ್ಪ ತಂದೆ ಹನುಮಂತಪ್ಪ ಕುದರಿಮೋತಿ (23) ಎಂದು ಗುರುತಿಸಲಾಗಿದೆ. ಇನ್ನೊರ್ವ ವ್ಯಕ್ತಿ ಅಂಬರೀಶ್ ತಂದೆ ತಿಪ್ಪಣ್ಣ ಬಂಕಾಪುರ ಎಂಬವರಿಗೆ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕುರಿ ಮೆಯಿಸಲು ಹೋದಾಗ ಈ ಘಟನೆ ಜರುಗಿದ್ದು.ಮುನಿರಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ