ಸಿಡಿಲು ಅಪ್ಪಳಿಸಿ 11 ಆಡುಗಳು ಬಲಿ

ಕಲಬುರಗಿ:ಮೇ.30: ಸಿಡಿಲು ಅಪ್ಪಳಿಸಿ ಹನ್ನೊಂದು ಆಡುಗಳು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಚಿಂಚೋಳಿ ತಾಲ್ಲೂಕಿನ ಹುಡದಳ್ಳಿ ಹಾಗೂ ಹೂವಿನಬಾವಿ ಸೀಮಾಂತರದಲ್ಲಿ ಶನಿವಾರ ಸಂಜೆ ವರದಿಯಾಗಿದೆ.
ಹೂವಿನಬಾವಿ ಗ್ರಾಮದ ಬಾಬು ತಂದೆ ಹಣಮಂತ್ ಪೂಜಾರಿ ಅವರಿಗೆ ಸೇರಿದ ಆಡುಗಳೇ ಮೃತಪಟ್ಟಿವೆ. ಆಡುಗಳನ್ನು ಮೇಯಿಸಲು ಹೋದಾಗ ಸಂಜೆ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವಾಗ ಸಿಡಿಲು ಬಡೆದು ಆಡುಗಳು ಅಸುನೀಗಿವೆ ಎಂದು ತಿಳಿದುಬಂದಿದೆ.