ಸಿಡಿಲಿಗೆ ಸಹಕಾರಿ ಧುರೀಣ ಅತನೂರೆ ಸಾವು

ಕಲಬುರಗಿ,ಮೇ.1: ಸಿಡಿಲು ಬಡೆದು ಸಹಕಾರಿ ಧುರೀಣ ಭೋಜರಾಜ್ ಅತನೂರೆ (54)ಅವರು ಅಸುನೀಗಿದ ದುರಂತ ಶನಿವಾರ ಮಧ್ಯಾಹ್ನ ಅಫಜಲಪುರ ತಾಲ್ಲೂಕಿನ ಬಡದಾಳದಲ್ಲಿ ವರದಿಯಾಗಿದೆ.
ರೈತ ಹಾಗೂ ವ್ಯವಸಾಯ ಸಹಕಾರ ಸಂಘದ ನಿರ್ದೇಶಕರಾಗಿಯೂ ಭೋಜರಾಜ್ ಅತನೂರೆ ಅವರು ಕಾರ್ಯನಿರ್ವಹಿಸುತ್ತಿದ್ದರು.ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ ಸಂದರ್ಭದಲ್ಲಿ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸಿಡಿಲು ಅಪ್ಪಳಿಸಿ ಅವರು ಸ್ಥಳದಲ್ಲಿಯೇ ಅಸುನೀಗಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರಿಯರು, ಅಪಾರ ಬಂಧು, ಬಳಗದವರನ್ನು ಬಿಟ್ಟು ಅಗಲಿದ್ದಾರೆ. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.