ಸಿಡಿಲಿಗೆ ಮಹಿಳೆ ಬಲಿ : ಮತ್ತೋರ್ವಳ ಸ್ಥಿತಿ ಗಂಭೀರ

ಹುಣಸಗಿ,ಜು.26-ತಾಲೂಕಿನ ಗುಂಡಲಗೇರಿ ಗ್ರಾಮದ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಮಹಿಳೆಯೊಬ್ಬಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಾಯಂಕಾಲ 5.30ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಗುಂಡಲಗೇರಿ ಗ್ರಾಮದ ಸತ್ಯಮ್ಮ ತಂದೆ ಪರಮಪ್ಪ ತಾಳ್ಗೇರಿ (25) ಎಂದು ಗುರುತಿಸಲಾಗಿದೆ.
ಇನ್ನೊಬ್ಬ ಮಹಿಳೆ ಚಂದ್ರಮ್ಮ ಗಂಡ ಭೀಮಪ್ಪ ತಾಳ್ಗೆರಿ (50) ಸ್ಥಿತಿ ಗಂಭೀರವಾಗಿದ್ದು, ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಣಸಗಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.