ಸಿಡಿಲಿಗೆ ದಿಕ್ಸಂಗಾ(ಕೆ) ಗ್ರಾಮದಲ್ಲಿ ಎತ್ತು ಬಲಿ

ಕಲಬುರಗಿ.ಜೂ.2: ಸಿಡಿಲು ಅಪ್ಪಳಿಸಿ ಒಂದು ಲಕ್ಷ ರೂ.ಗಳ ಮೌಲ್ಯದ ಎತ್ತೊಂದು ಅಸುನೀಗಿದ ದಾರುಣ ಘಟನೆ ಅಫಜಲಪುರ ತಾಲ್ಲೂಕಿನ ದಿಕ್ಗಂಗಾ (ಕೆ) ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ 1-40ಕ್ಕೆ ವರದಿಯಾಗಿದೆ.
ಶರಣಪ್ಪ ನಾಟೀಕಾರ್ ಎಂಬಾತನ ಎತ್ತೇ ಮೃತಪಟ್ಟಿದೆ. ಗುಡುಗು ಮಿಶ್ರಿತ ಮಳೆ ಆರಂಭವಾಗುತ್ತದೆ ಎಂದುಕೊಂಡು ರಕ್ಷಣೆಗಾಗಿ ಎತ್ತನ್ನು ಹೊಲದ ಬೇವಿನ ಗಿಡಕ್ಕೆ ಕಟ್ಟಲಾಗಿತ್ತು. ಆ ಸಂದರ್ಭದಲ್ಲಿಯೇ ಸಿಡಿಲು ಅಪ್ಪಳಿಸಿ ಎತ್ತು ಮೃತಪಟ್ಟಿತು ಎನ್ನಲಾಗಿದೆ.
ಸುದ್ದಿ ತಿಳಿದು ಪೋಲಿಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದರು. ಈರಣ್ಣ ತಲಾಟೆ, ಸಿದ್ರಾಮ್ ಪಡಶೆಟ್ಟಿ ವಾಲಿಕಾರ್, ಮೈನೂದ್ದೀನ್ ಶೇರಿಕಾರ್ ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಿದ್ದು ಮ್ಯಾಕೇರಿ, ಶರಣು ದೊಡ್ಡಮನಿ, ಪರಶುರಾಮ್ ಮ್ಯಾಕೇರಿ, ನಾಗಪ್ಪ ನಾಟೀಕಾರ್, ಮಹಾದೇವ್ ನಾಟೀಕಾರ್ ಮುಂತಾದವರು ಉಪಸ್ಥಿತರಿದ್ದರು.