ಸಿಡಿಲಿಗೆ ಓರ್ವ ಯುವಕ, 15 ಕುರಿ-ಮೇಕೆ ಬಲಿ.

ರಾಯಚೂರು ಏ 14:- ತೀವ್ರ ಗುಡುಗು ಸಿಡಿಲಿಗೆ ಓರ್ವ ಯುವಕ ಸೇರಿ 15 ಕುರಿ ಮತ್ತು ಮೇಕೆಗಳು ಬಲಿಯಾದ ಘಟನೆ ನಡೆದಿದೆ.
ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಹತ್ತಿರದ ಮೇದನಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತ ಯುವಕನನ್ನು ಈರಪ್ಪ.. ತಂದೆ ನಿಂಗಣ್ಣ ಎಂದು ಗುರುತಿಸಲಾಗಿದೆ. ಆನಂದಗಲ್ ಗ್ರಾಮದ ಜಮೀನೊಂದರಲ್ಲಿ ಗಿಡದ ಕೆಳಗೆ ಕುರಿ & ಮೇಕೆ ತಬ್ಬಲಾಗಿತ್ತು.
ಕುರಿಯ ಜೊತೆಗೆ ಇಬ್ಬರು ಯುವಕರಿದ್ದರು.. ಒಬ್ಬ ಯುವಕ ಹಿಂಡಿನಿಂದ ಹೊರ ಹೋದ ಮೂರ್ನಾಲ್ಕು ಕುರಿಗಳನ್ನು ತಿರುವಿಕೊಂಡು ಬರಲು ಹೋಗಿದ್ದ, ಹಾಗ ಮೃತ ಯುವಕ ಕುರಿಯ ಹಿಂಡಿನಲ್ಲಿದ್ದ.. ಆಗ ಸಿಡಿಲು ಬಡಿದಿದೆ ಎನ್ನಲಾಗಿದೆ.