ಕಲಬುರಗಿ,ಏ.17-ಕಳೆದ ರಾತ್ರಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದು ಎರಡು ಎತ್ತು ಒಂದು ಹಸು ಸಾವನ್ನಪ್ಪಿವೆ.
ನಗರದ ಬಿದ್ದಾಪುರ ಕಾಲೋನಿಯ ಬುದ್ಧವಿಹಾರದ ಬಳಿ ಸಿಡಿಲಿಗೆ ಬಿಡಾಡಿ ಹಸು ಬಲಿಯಾಗಿದೆ. ಇನ್ನು ಜಿಲ್ಲೆಯ ಹಾಗರಗಾ ಮತ್ತು ಶ್ರೀನಿವಾಸ ಸರಡಗಿಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ತಂಪೆರೆದ ಮಳೆ
ಸುಡು ಬಿಸಿಲಿನಿಂದ ಕಾದು ಕೆಂಡವಾಗಿದ್ದ ಇಳೆಗೆ ತಡರಾತ್ರಿ ಸುರಿದ ಮಳೆ ಸ್ವಲ್ಪ ತಂಪೆರೆದಿದೆ. ಭಾನುವಾರ ಜಿಲ್ಲೆಯಲ್ಲಿ ಗರಿಷ್ಠ 39, ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಬಿರು ಬಿಸಲಿನಿನ ತಾಪಮಾನದಿಂದಾಗಿ ಜನ ಬಸವಳಿದು ಹೋಗಿದ್ದರು. ರಾತ್ರಿ ಸುರಿದ ಮಳೆಯಿಂದ ವಾತಾವರಣ ಸ್ವಲ್ಪ ತಂಪಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.