ಸಿಡಿಲಿಗೆ ಇಬ್ಬರು ಬಲಿ

ಕಲಬುರಗಿ :ಮೇ.27: ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಇಬ್ಬರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಸತೀಶ್ ಪೆರ್ಲಾದ್ ಸೆಳಕೆ (40) ಹಾಗೂ ಪ್ರಕಾಶ್ ಏತ್ನಾಳ್ ವಾಗ್ಮೊರಿ (50) ಎಂದು ಗುರುತಿಸಲಾಗಿದೆ. ಮೃತಪಟ್ಟ ಸತೀಶ್ ಹಾಗೂ ಪ್ರಕಾಶ್ ಅವರು ನಾಲವಾರ ಗ್ರಾಮದಿಂದ ವಾಡಿ ಪಟ್ಟಣಕ್ಕೆ ತೆರಳುವಾಗ ಮಳೆ ಹಾಗೂ ಗಾಳಿಯಿಂದ ಆಶ್ರಯ ಪಡೆಯಲು ಮರದ ಬಳಿ ನಿಂತಿರುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ