ಸಿಡಿಲಬ್ಬರದ ಮಳೆ; 15 ಮನೆಗಳ ಮೇಲ್ಚಾವಣಿ ನಾಶ

ಜಗಳೂರು.ಏ.೨೪: ತಾಲ್ಲೂಕಿನ ತೊರೆಸಾಲುಭಾಗದ ಚಿಕ್ಕಮಲ್ಲನಹೊಳೆ, ಮಲ್ಲಾಪುರ, ದಿಬ್ಬದಹಳ್ಳಿ, ಕಮಂಡಲಗೊಂದಿ, ತಾಯಿಟೋಣಿ, ಹಾಲೇಹಳ್ಳಿ, ಸಾಲೇಹಳ್ಳಿ, ಹುಚ್ಚವ್ವನಹಹಳ್ಳಿ, ಹಿರೇಮಲ್ಲನಹೊಳೆ ಭಾಗದಲ್ಲಿ  ಗುಡುಗು,ಮಿಂಚು,ಸಿಡಿಲು, ಗಾಳಿ ಸಹಿತ ಬಾರಿ ಮಳೆಗೆ ಮನೆ ಮೇಲಿನ ಸೀಟ್ ಹಾರಿವೆ, ಮರಗಳು,ವಿದ್ಯುತ್ ಕಂಬಗಳು ಬಿದ್ದಿದ್ದು, ಸದ್ಯ ಯಾರಿಗೂ ಅನಾಹುತ ಸಂಬವಿಸಿಲ್ಲ ಎಂದು ತಿಳಿದರು ಬಂದಿದೆ.ತಾಯಿ ಟೋಣಿ ಗ್ರಾಮದಲ್ಲಿ ಸುಮಾರು 15 ಮನೆಗಳ ಮೇಲ್ಚಾವಣೆಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಸದ್ಯ ಯಾರಿಗೂ ಅನಾವತವಾಗಿಲ್ಲ ಎನ್ನಲಾಗಿದೆ. ಬಾರಿ ಮಳೆಗೆ ಆ ಭಾಗದ ಹಳ್ಳಗಳು ಹರಿಯುತ್ತಿವೆ. ಇದೇ ಮೊದಲ ಬಾರಿಗೆ ಉತ್ತಮವಾದ ಮಳೆ ಬಂದಿದೆ. ಹೊಲಗಳನ್ನು ಹದ ಮಾಡಲು ಅನುಕೂಲವಾಗಿದೆ. ಜನ ಜಾನುವಾನುವಾರುಗಳಿಗೆ ಮಳೆಯಿಂದ ಕುಡಿಯುವ ನೀರಿಗೂ ಅನುಕೂಲವಾಗಿದೆ. ಬಾರಿ ಗಾಳಿ ಬೀಸಿದ ಪ್ರತಿಫಲವಾಗಿ ಈ ಭಾಗದ ಹಲವಾರು ಮನೆಗಳ ಮೇಲ್ಚಾವಣೆಗಳು ಹಾರಿ ಹೋಗಿದ್ದು ಲಕ್ಷಾಂತರ ಹಣ ನಷ್ಟವಾಗಿದೆ ಎಂದು ಈ ಭಾಗದ ರೈತ ಅಮರೇಂದ್ರ ತಿಳಿಸಿದ್ದಾರೆ.