ಸಿಡಿಪಿಓ ಶೋಭಾ ಕಟ್ಟಿ ಎಸಿಬಿ ಬಲೆಗೆ

ಹುಮನಾಬಾದ:ನ.7:ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದಿ ಇಲಾಖೆಯ ಯೋಜನಾಧಿಕಾರಿ ಶೋಭಾ ಕಟ್ಟಿ 30 ಸಾವಿರ ಲಂಚ ಸ್ವೀಕರಿಸುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಸೀತಾಳಗೇರಾ ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿ ಅಂಬಿಕಾ ಸಿದ್ದಾರ್ಥ ಡಾಂಗೆ ಅವರು ಕಳೆದ ಕೆಲ ತಿಂಗಳಿಂದ ಸೀತಾಳಗೇರಾ ಅಂಗನವಾಡಿ ಕೇಂದ್ರದಿಂದ ಘೋಡವಾಡಿ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದರು.

ವರ್ಗಾವಣೆಗಾಗಿ ಸಿಡಿಪಿಓ ಶೋಭಾ ಕಟ್ಟಿ ಅವರು 50 ಸಾವಿರ ಹಣದ ಬೇಡಿಕೆ ಇಟ್ಟಿದರು. ಮೊದಲ ಕಂತು 30 ಸಾವಿರ ನೀಡಬೇಕು, ನಂತರ 20 ಸಾವಿರ ಹಣ ಕೂಡಬೇಕು, ಎಂದು ಹೇಳಿದ್ದರಿಂದ ಅಂಬಿಕಾ ಡಾಂಗೆ ಅವರ ಪತಿ ಸಿದ್ದಾರ್ಥ ಡಾಂಗೆ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದರು.

ಭ್ರಷ್ಟಾಚಾರ ನಿಗ್ರಹ ದಳದ ಎಸ್‍ಪಿ ಮಹೇಶ ಮೇಘಣ್ಣನವರ, ಡಿವೈಎಸ್‍ಪಿ ವೀರೇಶ ಕರಡಿಗುಡ್ಡಾ, ಸಿಪಿಐ ಶರಣಬಸವಪ್ಪಾ ಕೊಡ್ಲಾ, ಸಿಪಿಐ ವೆಂಕಟೇಶ ಯಾಡಹಳ್ಳಿ ಅವರು ಗುರುವಾರ ಸಾಯಂಕಾಲ ನೇರವಾಗಿ ದಾಳಿ ನಡೆಸಿ, ಪರಿಶೀಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ರಮೇಶ ಬೀಜಲವಾಡೆ, ಶ್ರೀಕಾಂತ ಸ್ವಾಮಿ, ಅನಿಲ್‍ಕುಮಾರ ಪರಶೆಟ್ಟಿ, ಕಿಶೋರ ಗಾಜರೆ, ಸರಸ್ವತಿ, ರಾಘವೇಂದ್ರ ವಿಠಲ್ ಇದ್ದರು.