ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಅಮೇರಿಕಾದ ಸೇವಾ ಇಂಟರ್‌ನ್ಯಾಷನಲ್ ನಿಂದ ಕೊಡುಗೆ

ದಾವಣಗೆರೆ.ಜೂ.೧೧: ಸಿಟಿ ಸೆಂಟ್ರಲ್ ಆಸ್ಪತ್ರೆಯು ಕಳೆದ ಎರಡು ದಶಕಗಳಿಂದ ದಾವಣಗೆರೆ ಹಾಗೂ ಮಧ್ಯ ಕರ್ನಾಟಕದ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗ ಚಿಕಿತ್ಸೆ ನೀಡುವಲ್ಲಿ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ  ಐ.ಸಿ.ಯು.ಚಿಕಿತ್ಸೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ.ಆಸ್ಪತ್ರೆ ಯಾವುದೇ ಪ್ರಚಾರ ಬಯಸದೇ ತನ್ನ ಉತ್ತಮ ಸೇವಾ ಮನೋಭಾವ ಉಳ್ಳ ವೈದ್ಯರು, ಸಿಬ್ಬಂದಿ ವರ್ಗ, ಶುಶ್ರೂಷಕ ವರ್ಗದ ಜೊತೆ ಸೇರಿ ಉತ್ತಮ ಕಾರ್ಯ ನಿರ್ವಹಣೆಯಲ್ಲಿ ಹೆಸರು ಪಡೆದಿದೆ. ಇದನ್ನು ಅಮೇರಿಕಾದ ಸೇವಾ ಇಂಟರ್ ನ್ಯಾಷನಲ್ ಸಂಸ್ಥೆ ಪರಿಗಣಿಸಿ ಐದು ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ ನೀಡಿದೆ.ಹಾಗೇ ಇದೇ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿ ಅವರ ಧರ್ಮ ಚಕ್ರ ಟ್ರಸ್ಟ್ ವತಿಯಿಂದ ಕಳೆದ ಮೂರು ವರ್ಷಗಳಿಂದ ನಡೆಸಿದ ಸಮಾಜ ಮುಖಿ ಕಾರ್ಯ ಗುರುತಿಸಿ ಇದೇ ಅಮೇರಿಕಾ ಸೇವಾ ಸಂಸ್ಥೆ ಸಿಟಿ ಸೆಂಟ್ರಲ್ ಆಸ್ಪತ್ರೆ ಸಹಯೋಗದೊಂದಿಗೆ ಆಕ್ಸಿಜನ್ ಉತ್ಪಾದನಾ ಘಟಕ ಆರಂಭಿಸಲು ಆರ್ಥಿಕ ಸಹಾಯ ನೀಡಲು ಒಪ್ಪಿಗೆ ನೀಡಿದೆ.ಈ ಸರಳ ಸಮಾರಂಭದಲ್ಲಿ  ಜಿಲ್ಲಾಧಿಕಾರಿಗಳಾದ ಶ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ ಹನುಮಂತರಾಯಪ್ಪ, ಆರ್‌ಎಸ್‌ಎಸ್ ಪ್ರಮುಖರಾದ  ಉಮಾಪತಿಯವರ ಸಮಕ್ಷಮದಲ್ಲಿ 5 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಲೋಕಾರ್ಪಣೆಗೊಂಡವು.