ಸಿಟಿ ರವಿಗೆ ಲೂಟಿ ಎಂದಿದ್ದು ಚೇಳು ಕಡಿದಂತಾಗಿದೆ

ಅಫಜಲಪುರ:ಸೆ.15:ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ.ಸಿ.ಡಿ.ಗೆ ತಡೆಯಾಜ್ಞೆ ತಂದವರು,ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು ಯಾವ ಪಕ್ಷದವರು?ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಲು-ಸಾಲು ವಿಡಿಯೋ ಹೊರಬಂದಿದ್ದು ಯಾವ ಪಕ್ಷದವರದ್ದು? ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿನಂತರ ಮಾತನಾಡಲು ಬನ್ನಿ ಎಂದು ಜಿಪಂ ಮಾಜಿ ಸದಸ್ಯ ಮತೀನ ಅಹ್ಮದ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಂಡ ಕಂಡಲ್ಲಿ ಕಚ್ಚೆ ಹರಿದುಕೊಂಡವರು ಬಿಜೆಪಿಗರೇ ಅಲ್ಲವೇ ಲೂಟಿ ರವಿ ಅವರೇ,ಬಿಜೆಪಿಯ ಕಚ್ಚೆ ಪುರಾಣಗಳು ರಾಜ್ಯದ ಹಳ್ಳಿಹಳ್ಳಿಗಳ ಕಟ್ಟೆ ಪುರಾಣಗಳಿಗೆ ಆಹಾರವಾಗಿವೆ.ಅತಿವೃಷ್ಟಿ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ಬಗ್ಗೆ ಒಂದಾದರೂ ಮಾತು ನಿಮ್ಮ ಬಾಯಲ್ಲಿ ಬರುವುದೇ?.ನೀವೆಷ್ಟೆ? ಬಾಯಿ ಹರಿದುಕೊಂಡರೂ ಮತ್ತೆ ಸಂಪುಟದಲ್ಲಿ ಸ್ಥಾನ ಸಿಗದು.ಸಿ.ಡಿ.ಗಳಿಗೆ ತಡೆಯಾಜ್ಞೆ ತಂದಿದ್ದು,40% ಕಮಿಷನ್ ತಿಂದಿದ್ದು,ನೆರೆ ಸಂತ್ರಸ್ತರನ್ನು ಮರೆತು ದೋಸೆ ತಿಂದಿದ್ದು ಮಾತ್ರ ಬಿಜೆಪಿಯ ಸಾಧನೆ ಹಾಗೂ ಸ್ಪಂದನೆ.ಸರ್ಕಾರದ ಒಂದು ಯಶಸ್ವಿ ಯೋಜನೆ ಬಗ್ಗೆ ಹೇಳಲೂ ಧಮ್ ಇಲ್ಲದೆ ಅನಗತ್ಯ ಹೇಳಿಕೆಗಳ ಮೂಲಕ ಸಿ.ಟಿ. ರವಿ ಅವರು ಕಾಲ ಕಳೆಯುತ್ತಿದ್ದಾರೆ.ಸಿದ್ಧರಾಮಯ್ಯ ಅವರನ್ನು ಕಚ್ಚೆಹರುಕ ಅನ್ನಬಹುದಲ್ವಾ? ಎಂಬ ಅತ್ಯಂತ ಕೀಳು ಶಬ್ದಗಳ ಮೂಲಕ ಜನನಾಯಕರಾದ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದಾರೆ.ಅಲ್ಲದೇ ಇದು ಮೈಸೂರು ಜನ ಹೇಳುತ್ತಾರೆ ಎಂದೂ ಹೇಳಿದ್ದಾರೆ.ಸಿದ್ದರಾಮಯ್ಯರ 75 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೈಸೂರಿನ ಜನ ಎಂದೂ ಹಾಗೆ ಹೇಳಿದವರಲ್ಲ.ಒಂದು ವೇಳೆ ಹೇಳಿದ್ದಾರೆ ಎನ್ನುವುದಾದರೆ ಸಿ.ಟಿ.ರವಿ ಅವರು ಸಾಕ್ಷ್ಯಾಧಾರ ಕೊಡಲಿ.ಸುಖಾಸುಮ್ಮನೆ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುವುದು ಸರಿಯಲ್ಲ ಎಂದು ಅವರು ಆಕ್ರೊ?ಶ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದ ಬಳಿಕ ಬಿಜೆಪಿಗೆ ಭಯ ಶುರುವಾಗಿದೆ.ಅದಕ್ಕಾಗಿ ಹಿಂದುಳಿದ ವರ್ಗಗಳ ನಾಯಕನನ್ನು ವೈಯಕ್ತಿಕವಾಗಿ ಕುಗ್ಗಿಸುವ ಹುನ್ನಾರ ನಡೆಯುತ್ತಿದೆ.ರಾಜಕಾರಣದಲ್ಲಿ ಟೀಕೆ ಸಹಜ.ಟೀಕೆ ಮಾಡುವಾಗ ಆರೋಗ್ಯಕರವಾದ ಟೀಕೆ ಮಾಡಲಿ. ಆದರೆ,ಸಿದ್ದರಾಮಯ್ಯನವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವಾಗ ಬಳಸುವ ಪದ ಅಸಹ್ಯವಾಗಿದೆ.ಸಿ.ಟಿ.ರವಿ ಅವರು ಕಚ್ಚೆ ಹರುಕ ಸಿದ್ದರಾಮಯ್ಯ ಎಂಬ ಹೇಳಿಕೆಯನ್ನು ಕೂಡಲೇ ಹಿಂದಕ್ಕೆ ಪಡೆದು ಕ್ಷಮೆ ಯಾಚನೆ ಮಾಡಬೇಕು.ಇಲ್ಲದಿದ್ದರೇ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.