ಸಿಟಿ ಬಸ್ ಸ್ಟಾಪ್ ಒಳಗಡೆ “ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಂಪು ಬೀರಿದ ಕವಿಗಳ” ಹೆಸರುಗಳು

ವಿಜಯಪುರ:ನ.4: ಗಾನಯೋಗಿ ಸಂಘದ” ವತಿಯಿಂದ ವಿಜಯಪುರದ ರಾಮನಗರ ಸಿಟಿ ಬಸ್ ಸ್ಟಾಪ್ ಸ್ವಚ್ಛಗೊಳಿಸಿ ಅದಕ್ಕೆ ಬಣ್ಣವನ್ನು ಹಚ್ಚಿ “ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಂಪು ಬೀರಿದ ಕವಿಗಳು” ಎಂಬ ಶೀರ್ಷಿಕೆಯೊಂದಿಗೆ ಸುಮಾರು 40ಕ್ಕಿಂತ ಹೆಚ್ಚು ಕವಿಗಳ ಹೆಸರುಗಳನ್ನು ಬಸ್ ಸ್ಟಾಪ್ ಒಳಗಡೆ ಬರೆಯಲಾಯಿತು.
ಈ ಸಂದರ್ಭದಲ್ಲಿ ಗಾನಯೋಗಿ ಸಂಘದ ಅಧ್ಯಕ್ಷರಾದ ಪ್ರಕಾಶ್.ಆರ್.ಕೆ., ಬಾಹುಬಲಿ ಶಿವಣ್ಣವರ, ರಾಜಕುಮಾರ್ ಹೊಸಟ್ಟಿ, ವೀರೇಶ್ ಸೊನ್ನಲಗಿ, ಸಚಿನ್ ವಾಲಿಕಾರ್, ವಿಠ್ಠಲ್ ಗುರುವಿನ್, ರವಿ ರತ್ನಾಕರ್, ಸಂತೋಷ್ ಚೌಹಾಣ್, ಮಹೇಶ್ ಕುಂಬಾರ್, ವಿಕಾಸ್ ಕಂಬಾಗಿ, ಬಾಬು , ಮುತ್ತುರಾಜ ಇತರರಿದ್ದರು.