ಸಿಜೆಐಗೆ ವಕೀಲರ ಪತ್ರಮೋದಿ-ಖರ್ಗೆ ವಾಕ್ಸಮರ

ನವದೆಹಲಿ,ಮಾ.೨೯- ದೇಶದಲ್ಲಿ ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ ಎಂದು ೬೦೦ಕ್ಕೂ ಹೆಚ್ಚು ವಕೀಲರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದ ವಿಷಯ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ದೇಶದಾದ್ಯಂತ ನೂರಾರು ವಕೀಲರು ಮತ್ತು ಕೆಲವು ವಕೀಲರ ಸಂಘಗಳು ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದ ನಂತರ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.೧೪೦ ಕೋಟಿ ಭಾರತೀಯರು ಕಾಂಗ್ರೆಸ್ ತಿರಸ್ಕರಿಸುತ್ತಿದ್ದಾರೆ” ಈಗ ನೂರಾರು ವಕೀಲರನ್ನು ಮುಂದಿಟ್ಟುಕೊಂಡುವ ನ್ಯಾಯಾಂಗದ ಸಮಗ್ರತೆಯನ್ನು ಹಾಳು .ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು “ಇತರರನ್ನು ಬೊಬ್ಬೆ ಹೊಡೆಯುವುದು ಮತ್ತು ಬೆದರಿಸುವುದು ಹಳೆಯ ಕಾಂಗ್ರೆಸ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಐದು ದಶಕಗಳ ಹಿಂದೆ ಅವರೇ ’ಬದ್ಧ ನ್ಯಾಯಾಂಗ’ಕ್ಕೆ ಕರೆ ನೀಡಿದ್ದರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಇತರರಿಂದ ಬದ್ಧತೆ ಬಯಸುತ್ತಾರೆ, ಆದರೆ ರಾಷ್ಟ್ರದ ಬಗೆಗಿನ ಯಾವುದೇ ಬದ್ಧತೆಯನ್ನು ತ್ಯಜಿಸುತ್ತಾರೆ” ಎಂದು ಹೇಳಿದ್ದಾರೆ. ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ ೬೦೦ ಕ್ಕೂ ಹೆಚ್ಚು ವಕೀಲರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದ ನಂತರ, “ಪಟ್ಟಭದ್ರ ಹಿತಾಸಕ್ತಿ ಗುಂಪು” ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ವಿಶೇಷವಾಗಿ ನ್ಯಾಯಾಲಯಗಳಿಗೆ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.ವಕೀಲರ ಪತ್ರವನ್ನು ಉಲ್ಲೇಖಿಸಿ ಕೇಂದ್ರ ಸಚಿವ ಮತ್ತು ಅರುಣಾಚಲ ಪಶ್ಚಿಮ ಅಭ್ಯರ್ಥಿ ಕಿರಣ್ ರಿಜಿಜು ಅವರು ಈಗ ಬಹಿರಂಗವಾಗಿ ಧ್ವನಿ ಎತ್ತಿದ್ದಾರೆ.
ಭಾರತೀಯ ಸಂವಿಧಾನ ಅಮಾನತುಗೊಳಿಸಿದ್ದಾರೆ. ಕಾಂಗ್ರೆಸ್ ಮತ್ತು ಎಡಪಂಥೀಯರು ನ್ಯಾಯಾಲಯಗಳು ಮತ್ತು ಸಾಂವಿಧಾನಿಕ ಅಧಿಕಾರಿಗಳು ಅವರಿಗೆ ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ ಎಂದಿದ್ದಾರೆ.
ಪ್ರಧಾನಿ ವಿರುದ್ದ ಖರ್ಗೆ ವಾಗ್ದಾಳಿ
ನ್ಯಾಯಾಂಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಭಾರತದ ಸಂಸ್ಥೆಗಳನ್ನು ವೈಯಕ್ತಿಕ ಆಸ್ತಿ ಎಂದು ಪರಿಗಣಿಸುತ್ತಿರುವುದರಿಂದ, ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುವುದು ಅಗತ್ಯವಾಗಿಧ.ನಾಲ್ಕು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಪತ್ರಿಕಾಗೋಷ್ಠಿಯನ್ನು ಏಕೆ ನಡೆಸಿದರು ಮತ್ತು ನಿಮ್ಮ ಆಡಳಿತದಿಂದ ’ಪ್ರಜಾಪ್ರಭುತ್ವದ ನಾಶ’ದ ವಿರುದ್ಧ ಎಚ್ಚರಿಕೆ ನೀಡಿದರು ನಿಮ್ಮ ಸರ್ಕಾರದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನ್ಯಾಯಾಧೀಶರು ಎಂದು ವಾಗ್ದಾಳಿ ನಡೆಸಿದ್ದಾರೆ.