ಸಿಜಿಕೆ ಬೀದಿರಂಗ ದಿನ, ಸುರೇಶಗೆ ಪ್ರಶಸ್ತಿ ಪ್ರದಾನ

ರಾಯಚೂರು,ಆ.೧೨-
ಕರ್ನಾಟಕ ಬೀದಿನಾಟಕ ಅಕಾಡೆಮಿ ಹಾಗೂ ರಂಗಸಿರಿ ಸಾಂಸ್ಕೃತಿಕ ಕಲಾಬಳಗ ವತಿಯಿಂದ ಸಿಜಿಕೆ ಬೀದಿರಂಗ ದಿನ ಕಾರ್ಯಕ್ರಮವು ಇಂದು ನಗರದ ಕನ್ನಡ ಭವನದಲ್ಲಿ ಜರುಗಿತು.
ಸಿಜಿಕೆ ಪ್ರಶಸ್ತಿ ಪ್ರದಾನವನ್ನು ಸುರೇಶ ಅವರಿಗೆ ನೀಡಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಹಿರಿಯ ಸಾಹಿತಿ ಬಂಡಾಯ ಸಾಬೀತು ಬಾಬು ಭಂಡಾರಿಗಲ್ ಅವರು ಮಾಡಿದರು.ಪ್ರಾಸ್ತಾವಿಕವಾಗಿ ರಂಗಸಿರಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ರಂಗಸಿರಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರಂಗಭೂಮಿ ಕಲಾವಿದ ಮಲ್ಲನಗೌಡ ಇಂದುಪುರ ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ರಾಯಚೂರಿನ ಹಿರಿಯ ರಂಗಭೂಮಿ ಕಲಾವಿದ ವಿ.ಎನ್ ಅಕ್ಕಿ, ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆರ್.ಗುರುನಾಥ, ರಂಗ ನಿರ್ದೇಶಕ ಪ್ರವೀಣ್ ರೆಡ್ಡಿ ಗುಂಜಹಳ್ಳಿ, ಸಿಜಿಕೆ ಬಿದಿರಂಗ ಆಚರಣಾ ಸಮಿತಿ ಸಂಚಾಲಕ ಸಿ.ಎಂ.ಸುರೇಶ ಅವರು ಭಾಗವಹಿಸಿದ್ದರು.