ಸಿಗರೇಟ್ ಬಾಕ್ಸ್ ವಾಹನ ಕಳವು ಪತ್ತೆ ಐವರು ಆರೋಪಿಗಳ ಬಂಧನ:61.49 ಲಕ್ಷ ರೂ.ಮೌಲ್ಯದ ವಸ್ತು ಜಪ್ತಿ

ವಿಜಯಪುರ,ಆ 10 : ಆದರ್ಶನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಟಿಸಿ ಕಂಪನಿಯ ಸಿಗರೇಟ್ ಬಾಕ್ಸ ತುಂಬಿದ ವಾಹನ, ಒಂದು ಗೂಡ್ಸ್ ವಾಹನ ಕಳ್ಳತನ ಮಾಡಿರುವ ಪ್ರಕರಣವನ್ನು ವಿಜಯಪುರ ಪೆÇಲೀಸರು ಬೇಧಿಸಿದ್ದು, ಈ ಸಂದರ್ಭದಲ್ಲಿ ಗುಜರಾತ್ ರಾಜ್ಯದ ವಾಲ್ಸಾದ ಉಂಬರಗಾನ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಎಕ್ಸ್ಯುವಿ-300 ವಾಹನ ಸಹ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಪೆÇಲೀಸರು ಆರೋಪಿಗಳಿಂದ 61,49,514 ಲಕ್ಷ ರೂ.ಗಳ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಗೇಗನವಾಡಿ ಗೋವಂಡಿ ಗ್ರಾಮದ ಮೊಹ್ಮದ್‍ರೇಹಾನ್ ಆಫ್ತಾಬ್ ಶೇಖ (45), ರಾಜಸ್ತಾನದ ರಾಮಪಾಲ್ ಉರ್ಫ್ ರಾಮ್ ಉರ್ಫ್ ಮನೋಜ್ ಹರಿರಾಮ ಚೌಧರಿ (31), ರಾಜಸ್ತಾನದ ತೇಜರಾಮ್ ಉರ್ಫ್ ತೇಜಸ್ ಉರ್ಫ್ ಮನ್ಯಾ ಚಂಪಾಲಾಲ ಉನೇಚ, ರಾಜಸ್ತಾನದ ಚೈನಾರಾಮ ಉರ್ಫ್ ಚೇತನ ಉರ್ಫ್ ಮುಖ್ಯಾ ಮಿಶ್ರೀಲಾಲ್ ಜಾಟ, ದೀಪಾರಾಮ ಉರ್ಫ್ ದೀಪಾ ಮಿಶ್ರೀಲಾಲ ಜಾಟ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 37,49,514 ರೂ. ಮೌಲ್ಯದ ಐಟಿಸಿ ಕಂಪನಿಯ ಸಿಗರೇಟ್ ಬಾಕ್ಸ್ ತುಂಬಿದ ವಾಹನ, ಕೃತ್ಯಕ್ಕೆ ಬಳಸಿದ ಒಂದು ಫೆÇೀರ್ಡ್ ವಾಹನ, ಎಕ್ಸ್ಯುವಿ-300 ಕಾರು, ಒಂದು ಅಶೋಕ ಲೈಲಾಂಡ್ ಕಂಪನಿಯ ಗೂಡ್ಸ್ ವಾಹನ ಸೇರಿದಂತೆ 61,49,514 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೆÇಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ, ಈ ಪ್ರಕರಣವನ್ನು ಬೇಧಿಸುವಲ್ಲಿ ವಿಜಯಪುರ ಜಿಲ್ಲಾ ಪೆÇಲೀಸರ ತಂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಪುಣೆ, ಮುಂಬೈ, ಬಾಗಲಕೋಟೆ ಮೊದಲಾದ ಕಡೆಗಳಲ್ಲಿ ತನಿಖೆಯಲ್ಲಿದ್ದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದರು.