ಸಿಗದ ಚಿಕಿತ್ಸೆ; ಕೊವಿಡ್ ನಿಂದ ಮಹಿಳೆ ಸಾವು

ದಾವಣಗೆರೆ.ಏ.೨೭;  ತಾಲ್ಲೂಕಿನ ಲೋಕಿಕೆರೆ ಗ್ರಾಮದ ನಿರ್ಮಲಮ್ಮ ಕೋವಿಡ್ ಸೋಂಕಿನಿಂದ ಮೃತ್ತಪಟ್ಟಿದ್ದಾರೆ.ಸರಿಯಾದ ಸಮಯಕ್ಕೆ ಇವರಿಗೆ ಚಿಕಿತ್ಸೆ ಸಿಗದೆ ಇಂದು ಮೃತಪಟ್ಟಿದ್ದಾರೆ , ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮಗಳನ್ನು ಮಾಡದೇ ಇರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವ ಎಲ್ಲಾ ಸಂಭವ ಎದ್ದು ಕಾಣುತ್ತಿದೆ.
ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಎಸ್.ಬಸವಂತಪ್ಪ ನವರು ಪತ್ರಿಕಾಗೋಷ್ಠಿ ಮುಖಾಂತರ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಕೋವಿಡ್ ನಿಂದಾಗುವಂತಹ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು ಸಹ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಮಾಡಿಕೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.