ಸಿಕ್ಯಾಬ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ವಿಜಯಪುರ, ಆ.4-ಸಾರ್ವಜನಿಕ ಶಿಕ್ಷಣ ಇಲಾಖೆಯವರು ವಿಜಯಪುರ ನಗರದ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಏರ್ಪಡಿಸಿದ್ದ ವಿಜಯಪುರ ವಲಯಮಟ್ಟದ ಕ್ರೀಡಾಕೂಟದಲ್ಲಿ ಸಿಕ್ಯಾಬ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಯಕ್ತಿಯ ವಿಭಾಗದಲ್ಲಿ ಸಾಕೀಬ ಲಷ್ಕರಿ 800 ಮೀಟರ ಓಟದಲ್ಲಿ ಪ್ರಥಮ ಸ್ಥಾನ ಜೈದ ಕೋಲಾರ ಡಿಸ್ಕಸ್ ಥ್ರೋದಲ್ಲಿ ಪ್ರಥಮ ಸ್ಥಾನ, ಆಯುಬ ನೆಗಿನಾಳ 100 ಮೀಟರ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ 800 ಮೀಟರ ಓಟದಲ್ಲಿ ತೃತೀಯ ಸ್ಥಾನ, 3000 ಮೀಟರ ಸ್ಲೋವಾಕ್‍ನಲ್ಲಿ ಮುದಸರ ಮುಲ್ಲಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗುಂಪು ಆಟಗಳಾದ ವಾಲಿಬಾಲ್ ಮತ್ತು ರಿಲೆಯಲ್ಲಿ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡು ಶಾಲೆಯ ಕೀರ್ತಿ ತಂದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಸಾಧನೆಗೆ ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷರಾದ ಎಚ್.ಎ. ಪುಣೇಕರ, ಕಾರ್ಯದರ್ಶಿ ಎ.ಎಸ್. ಪಾಟೀಲ, ನಿರ್ದೇಶಕರಾದ ಸಲಾವುದ್ದಿನ ಅಯ್ಯುಬಿ, ಜಿಯಾ ಅಬಿದೀನ ಪುಣೇಕರ, ಮುಖ್ಯ ಗುರುಗಳಾದ ಎ.ಎಂ. ಗಲಗಲಿ ಮತ್ತು ದೈಹಿಕ ಶಿಕ್ಷಕರಾದ ವಿನೋದ ಕೊಟ್ಯಾಳ ಸೇರಿದಂತೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.