ಸಿಕ್ಯಾಬ್ ಕಾಲೇಜಿನಲ್ಲಿ ಕೋವಿಡ್ ಪರೀಕ್ಷೆ

ವಿಜಯಪುರ, ನ.19-ನಗರದ ಸಿಕ್ಯಾಬ ಸಂಸ್ಥೆಯ ಎ. ಆರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರ ಕೋವಿಡ್-19 ಪರೀಕ್ಷೆ ನಡೆಸಲಾಯಿತು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಕವಿತಾ ಅವರ ಮಾರ್ಗದರ್ಶನ ಹಾಗೂ ಗಣೇಶನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮುಜೀಬುರ್ ಮುಜಾಹಿದ್ ನೇತೃತ್ವದಲ್ಲಿ ಕಾಲೇಜು ಪ್ರಾಧ್ಯಾಪಕರ, ಕಾರ್ಯಾಲಯ ಸಿಬ್ಬಂದಿ, ಬಿಎ, ಬಿಎಸ್ಸಿ, ಬಿಕಾಂ ಅಂತಿಮವರ್ಷದ ವಿದ್ಯಾರ್ಥಿನಿಯರ ಕೊರೋನಾ ವೈರಸ್ ಪರೀಕ್ಷೆಯನ್ನು ಕೈಗೋಳ್ಳಲಾಯಿತು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ವಾಣಿಶ್ರೀ ಹಿರೇಮಠ, ಸುಷ್ಮಿತಾ ಕಟ್ಟಿಮನಿ, ರಾಧಾ ಪಾಟೀಲ್, ಆರತಿ ಭಾವಿಮನಿ, ಬಸಮ್ಮ ಹಳೆಮನಿ, ಶ್ರುತಿ ಹಳ್ಳಿ ಹಾಗೂ ಸನಾ ಆಳಂದ ಇವರು ಪ್ರತಿಯೊಬ್ಬರಿಂದ ಇಲಾಖೆಯ ನಿರ್ದೇಶನದಂತೆ ನಮೂನೆಗಳನ್ನು ಸಂಗ್ರಹಿಸಿದರು. ಪ್ರಾಚಾರ್ಯ ಡಾ. ಮಹಮ್ಮದ್ ಅಫ್ಜಲ್ ಉಪಪ್ರಾಚಾರ್ಯರಾದ ಭಾಗ್ಯಶ್ರೀ ಸೇವತ್ಕರ, ಎನ್‍ಎಸ್‍ಎಸ್ ಅಧಿಕಾರಿಗಳು, ದೈಹಿಕ ಶಿಕ್ಷಣ ನಿರ್ದೇಶಕರು ನಮೂನೆ ಸಂಗ್ರಹ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದರು.