ಸಿಕ್ಕ ಹಣ ವಾಪಸ್ ನೀಡಿ ಕರ್ತವ್ಯನಿಷ್ಠೆ ತೋರಿದ ಪೊಲೀಸ್ ಪೇದೆ

(ಜಿ.ಪಿ. ಘೋರ್ಪಡೆ)
ತಾಳಿಕೋಟೆ:ಜೂ.22: ರಸ್ತೆಯಲ್ಲಿ 1 ರೂ.ನಾಣ್ಯ ಸಿಕ್ಕರೂ ಕೂಡಾ ಹಿಂದೆ ನೋಡದೇ ಕಾಲ್ಕಿತ್ತುವ ಜನರನ್ನು ನಾವು ಸಾಕಷ್ಟು ನೋಡುತ್ತೇವೆ ಆದರೆ ಪೊಲೀಸ್ ಪೇದೆಯೊಬ್ಬರಿಗೆ 10 ಸಾವಿರ ರೂ. ನಗದು ಇದ್ದ ಮಹಿಳೆಯ ಪರ್ಸ್ ಸಿಕ್ಕಾಗ ಅದರಲ್ಲಿಯ ಆದಾರ ಕಾರ್ಡನಲ್ಲಿದ್ದ ದಾಖಲೆಯ ವಿಳಾಸಕ್ಕೆ ಸಂಪರ್ಕಕ್ಕೆ ಪಡೆದು ಹಣ ಮತ್ತು ದಾಖಲಾತಿಗಳನ್ನು ಮರಳಿ ನೀಡಿ ಆದರ್ಶದ ಜೊತೆಗೆ ಕರ್ತವ್ಯ ನಿಷ್ಠೆ ಮೇರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ತಾಲೂಕಿನ ಚೀರಲದಿನ್ನಿ ಗ್ರಾಮದ ಕಸ್ತೂರಿಬಾಯಿ ಸಿದ್ದನಗೌಡ ಪಾಟೀಲ ಎಂಬ ಮಹಿಳೆಯು ಕೇಂಭಾವಿ ಪಟ್ಟಣದ ಖಾಸಗಿ ಶಾಲೆಯಲ್ಲಿ ಮಗಳ ಪ್ರವೇಶಾತಿಗೆ ತೆರಳಿದ್ದಾಗ ಶುಲ್ಕ ಕಟ್ಟಲು ತಂದಿದ್ದ 10 ಸಾವಿರ ರೂ. ಹಾಗೂ ಆದಾಡ ಕಾರ್ಡ ಮತ್ತು ಇನ್ನೂಳಿದ ಮಗಳ ಶಾಲಾ ದಾಖಲಾತಿಗಳೊಂದಿಗೆ ತನ್ನಲ್ಲಿದ್ದ ಪರ್ಸ್‍ನ್ನು ಪಟ್ಟಣದ ಜನ ಜಂಗೂಳಿ ಇರುವ ಪ್ರದೇಶದ ರಸ್ತೆಯಲ್ಲಿ ಕಳೆದುಕೊಂಡಿದ್ದಳು. ಆ ಸಮಯದ ಸ್ವಲ್ಪ ಹೊತ್ತಿನ ಬಳಿಕ ಮಹಿಳೆಯು ಪರ್ಸ್‍ನ್ನು ಸಾಕಷ್ಟು ಹುಡುಕಾಟ ನಡೆಸಿದರೂ ಸಿಕ್ಕಿದ್ದಿಲ್ಲಾ ಇದರಿಂದ ಬೇಸರಗೊಂಡು ಮರಳಿ ತನ್ನ ಸ್ವಗ್ರಾಮವಾದ ಮುದ್ದೇಬಿಹಾಳ ತಾಲೂಕಿನ ಚೀರಲದಿನ್ನಿ ಗ್ರಾಮಕ್ಕೆ ತೆರಳಿದ್ದಳು.
ಕರ್ತವ್ಯದ ಮೇಲೆ ಬೈಕಿನಲ್ಲಿ ಹೋಗುತ್ತಿದ್ದ ಕೇಂಭಾವಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ತಿರುಪತಿಗೌಡ ಆನೇಸೂರ(ಭಂಟನೂರ) ಅವರ ಕೈಗೆ ಅದೃಷ್ಠವೆಂಬಂತೆ ಸಿಕ್ಕಿತ್ತು ಆ ಸಮಯದಲ್ಲಿ ಪರ್ಸ್‍ನಲ್ಲಿಯ ಹಣ ಮತ್ತು ಆದಾರ ಕಾರ್ಡ ಅಲ್ಲದೇ ಇನ್ನಿತರ ದಾಖಲಾತಿಗಳನ್ನು ನೋಡಿ ಆದಾರ ಕಾರ್ಡಿನ ದಾಖಲಾತಿಯಲ್ಲಿದ್ದ ವಿಳಾಸದ ಮೂಲಕ ಮುದ್ದೇಬಿಹಾಳ ಪೊಲೀಸ್‍ಠಾಣೆಯ ಸ್ನೇಹಿತ ಸಿಬ್ಬಂದಿಗಳನ್ನು ಸಂಪರ್ಕಿಸಿ ಕಸ್ತೂರಿಬಾಯಿ ಪಾಟೀಲ ಅವರ ಕುಟುಂಭದವರನ್ನು ಸಂಪರ್ಕಕ್ಕೆ ಪಡೆದು ಸಿಕ್ಕ ಹಣ ಮತ್ತು ಆದಾರ ಕಾರ್ಡ ಇನ್ನೂಳಿದ ದಾಖಲೆಗಳನ್ನು ಮರಳಿ ನೀಡಿ ಕರ್ತವ್ಯ ನಿಷ್ಠೆಯ ಜೊತೆಗೆ ಆದರ್ಶ ಪೊಲೀಸ್ ಪೊಲೀಸ್ ಪೇದೆ ಎನ್ನಿಸಿಕೊಂಡಿದ್ದಾರೆ. ಹಣ ಮರಳಿಸಿದ ಪೊಲೀಸ್ ಪೇದೆ ತಿರುಪತಿಗೌಡ ಆನೇಸೂರ(ಭಂಟನೂರ) ಅವರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಇಂದಿನ ದಿನಮಾನದಲ್ಲಿ ಪೊಲೀಸ್ ಸಿಬ್ಬಂದಿಗಳಿಳು ಹಣ ಸಿಕ್ಕರೆ ಸಾಕು ಎನ್ನುತ್ತಾರೆಂಬ ಜನರ ಮಾತಿನ ಮಧ್ಯ ಮತ್ತು ಅಪಕೀರ್ತಿಯ ನಡುವೆ ಮಾದರಿಯ ಪೊಲೀಸ್ ಪೇದೆಯಾಗಿ ಕರ್ತವ್ಯನಿಷ್ಠರಾಗಿ ತಿರುಪತಿಗೌಡ ಆನೇಸೂರ ಹೊರಹೊಮ್ಮಿದ್ದಾರೆಂದರೆ ತಪ್ಪಾಗಲಾರದು.
ನನ್ನ ಮಗಳು ಕೇಂಭಾವಿಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದು ಅವಳ ಮುಂದಿನ ಶಾಲಾ ಶುಲ್ಕ ಕಟ್ಟಲು ಹಣ ಮತ್ತು ದಾಖಲೆಗಳೊಂದಿಗೆ ಕೇಂಭಾವಿ ಪಟ್ಟಣಕ್ಕೆ ಹೋಗಿದ್ದೇ ಆಕಸ್ಮೀಕವಾಗಿ ಶಾಲಾ ಶುಲ್ಕಕ್ಕೆಂದು ತಂದ ಪರ್ಸ್‍ಸಮೇತ ವಿವಿಧ ದಾಖಲೆಗಳು ಕಳೆದು ಹೋಗಿದ್ದವು ಎಷ್ಟೇ ಹುಡುಕಾಡಿದರೂ ಸಿಕ್ಕಿದ್ದಿಲ್ಲಾ ಮರಳಿ ಗ್ರಾಮಕ್ಕೆ ಬಂದಿದ್ದೆ ಪೊಲೀಸ್‍ರು ಕರೆ ಮಾಡಿ ನಿಮ್ಮ ಹಣ ದಾಖಲೆಗಳು ಸಿಕ್ಕಿವೆ ಬಂದು ತೆಗೆದುಕೊಂಡು ಹೋಗಿ ಎಂದಾಗ ಖುಷಿ ನೀಡಿತು ಕರ್ತವ್ಯ ನಿಷ್ಠೆ ಮೇರೆದ ಪೊಲೀಸ್ ಪೇದೆ ತಿರುಪತಿಗೌಡ ಆನೇಸೂರ ಅವರಿಗೆ ಚೀರಋಣಿಯಾಗಿದ್ದೇನೆ.
ಕಸ್ತೂರಿಬಾಯಿ ಪಾಟೀಲ
ಹಣ ಕಳೆದುಕೊಂಡ ಮಹಿಳೆ