ಸಿಕ್ಕ ಅಧಿಕಾರ ಸದ್ಭಳಕೆಗೆ ಕರೆ

ಸಿಂದಗಿ;ಡಿ.18: ದಿ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‍ಜಿಯವರ ಅಧಿಕಾರಾವಧಿಯಲ್ಲಿ ಮಾಡಿದ ಕಾರ್ಯಕ್ರಮಗಳು ರಾಜ್ಯದ ಎಲ್ ಸಮೂದಾಯಕ್ಕೂ ನ್ಯಾಯ ದೊರಕಿಸಿಕೊಟ್ಟಿದೆ ಅದಕ್ಕೆ ಇಂದು ಭಾರತ ಸರಕಾರದ ಅಂಚೆ ಇಲಾಖೆಯು ಅವರ ಹೆಸರಿನಿಂದ ಅಂಚೆ ಚೀಟಿ ಪ್ರಕಟಿಸುತ್ತಿದೆ ಎಂದು ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಹೇಳಿದರು.
ಪಟ್ಟಣದ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರ ಸ್ವಗೃಹದಲ್ಲಿ ಆಥಿತ್ಯವನ್ನು ಸ್ವೀಕರಿಸಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಮುಖ್ಯವಲ್ಲ ಸಿಕ್ಕ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಜನಸೇವೆ ಮಾಡುವುದರಿಂದ ಜನಾನುರಾಗುತ್ತಾರೆ ಅಂತೇಯೇ ಅವರ ಅವಧಿಯಲ್ಲಿನ ಕಾಮಗಾರಿಗಳು ಅಚ್ಚೆಳಿಯದೆ ಉಳಿದಿವೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಇಂದು ಹೈ.ಕ.ಪ್ರಾಧಿಕಾರದಿಂದ ಅನೇಕ ಯೋಜನೆಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುವಂತಾಗಿವೆ ಎಂದು ರಾಜಕೀಯವಾಗಿ ಮೆಲಕು ಹಾಕಿದರು.
ಜೆಡಿಎಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನಮ್ಮ ತಂದೆಯವರಾದ ಎಂ.ಸಿ.ಮನಗೂಳಿಯವರಿಗೆ ಅನೇಕ ಜನಪರ ಕಾರ್ಯÀಗಳಿಗೆ ಸ್ಪಂದಿಸಿದ ಶ್ರೇಯಸ್ಸು ತಮ್ಮ ದ್ದಾಗಿದೆ. ಈವಾಗ್ಗೆ ಬಿಜೆಪಿ ಸರಕಾರದ ಅಧಿಕಾರದಲ್ಲಿದ್ದು ಹಿಂದೆ ಮಂಜೂರಾದ ಕಾಮಗಾರಿಗಳನ್ನು ಫಲಪ್ರದವಾಗಿ ನಡೆಯುವಂತೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ವೇಳೆ ಪುರಸಭೆ ಅದ್ಯಕ್ಷ ಶಾಂತವೀರ ಮನಗೂಳಿ, ಉಪಾದ್ಯಕ್ಷ ಹಾಸೀಮ್ ಅಳಂದ ಅವರು ಅವರನ್ನು ಸನ್ಮಾಸಿದರು.
ಈ ಸಂದರ್ಭದಲ್ಲಿ ಗೋಲ್ಲಾಳಪ್ಪಗೌಡ ಮಾಗಣಗೇರಿ, ಶೌಕತಲಿ ಸುಂಬಡ ಮಹಿಬೂಬ ಅಳಂದ, ಕುಮಾರ ಬಗಲಿ, ಸೇರಿದಂತೆ ಹಲವರಿದ್ದರು.