
ಶಿವಮೊಗ್ಗ, ಡಿ. 26; ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಬೀದಿನಾಯಿಯೊಂದು ಸುಮಾರು 18 ಕ್ಕೂ ಅಧಿಕ ಜನರಿಗೆ ಕಚ್ಚಿರುವ ಘಟನೆ ನಡೆದಿದೆ.ಬೀದಿ ನಾಯಿಗೆ ಹುಚ್ಚು ಹಿಡಿದಿರುವ ಕಾರಣದಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿ ಕಚ್ಚಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.ಸಂತೆ ಮೈದಾನದಿಂದ ನಾಯಿ ಎಲ್ಲರನ್ನೂ ಅಟ್ಟಿಸಿಕೊಂಡು ಬಂದಿದೆ. ಸುಮಾರು ,18 ಕ್ಕೂ ಅಧಿಕ ಜನರಿಗೆ ಕಚ್ಚಿದೆ. ಕೆಲವರು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.