ಸಿಐಟಿಯು ಸಂಘಟನೆಯಿಂದ ಕಾರ್ಮಿಕ ದಿನಾಚರಣೆ

ಮಾನ್ವಿ,ಮೇ.೦೧- ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ತಾಲೂಕ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಮಿತಿಯಿಂದ ಇಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಪಟ್ಟಣದ ಪಂಪಾ ಉದ್ಯಾನವನದಲ್ಲಿ ಇಂದು ಸಿಐಟಿಯು ಸಮಿತಿಯಿಂದ ಕಾರ್ಮಿಕ ಧ್ವಜಾರೋಹಣವನ್ನು ಮಾಡಿ ಮಾತಾನಾಡಿದ ಅಧ್ಯಕ್ಷ. ಎಚ್ ಶರ್ಫುದ್ದೀನ್ ಕಾರ್ಮಿಕ ಚಳುವಳಿಯಲ್ಲಿ ಪಾಶ್ಚಿಮಾತ್ಯ ದೇಶದ ಅಮೇರಿಕಾದ ಚಿಕಾಗೊ ನಗರದಿಂದ ವ್ಯಾಪಿಸಿದ ಈ ಸಂಘಟನೆಯು ನಿರಂತರವಾಗಿ ಹೋರಾಟದ ಮೂಲಕ ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟದಲ್ಲಿ ಅನೇಕರು ಬಲಿದಾನದವಾದ ಇತಿಹಾಸವಿದೆ ಎಂದರು.
ಅಮೇರಿಕಾದಲ್ಲಿ ನಡೆದ ಕಾರ್ಮಿಕ ಹೋರಾಟದಲ್ಲಿ ಐದು ಜನ ಕಾರ್ಮಿಕರ ಬಲಿದಾನ ನಡೆದಿರುವ ಮೇ ಒಂದನೇ ದಿನಾಂಕವನ್ನು ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಎಂದು ಘೋಷಣೆ ಮಾಡಲಾಯಿತು ಎಂದರು ನಂತರ ಕಾರ್ಮಿಕರಿಗೆ ಸಂಬಂಧಿಸಿದ ಹಕ್ಕೊತ್ತಾಯ ಒಳಗೊಂಡಿರುವ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಪೂರೈಸಲು ಸರ್ಕಾರಕ್ಕೆ ಒತ್ತಾಯಿಸಿ ಮುದ್ರಿಸಿರುವ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಸಿದ್ದಲಿಂಗಯ್ಯ, ಕಟ್ಟಡ ನಿರ್ಮಾಣ ಸಂಘದ ಅಧ್ಯಕ್ಷ ರುದ್ರಪ್ಪ ನಾಯಕ, ಕಾರ್ಯದರ್ಶಿ ಆಂಜನೇಯ, ಆಂಜನೇಯ, ಎಂ ಡಿ ರಫೀ, ವೆಂಕಟೇಶ, ರಾಮಣ್ಣ, ವೆಂಕೋಬ, ಮಸ್ತಾನ್, ಶಾಂತಕುಮಾರ, ರೆಹಮಾತ್, ರಮೇಶ, ಮಹಮ್ಮದ್ ನೀರಮಾನವಿ ಸೇರಿದಂತೆ ಅನೇಕರು ಇದ್ದರು.