ಸಿಎ ಪಾಸ್ ಮಾಡಿದ ವಿದ್ಯಾರ್ಥಿನಿ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜ.13 ಪಟ್ಟಣದ ಪ್ರಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಅಕ್ಕಿ ಬಸವರಾಜ್ ಪುತ್ರಿ ಕು. ಸಂಪದ ಬಿ ಅಕ್ಕಿ ಇತ್ತೀಚೆಗೆ ದೇಶದಲ್ಲಿ ನಡೆದ ದಿ ಇನಸ್ಟಿಟ್ಯೂಟ್ ಸಿಎ ಆಫ್ ಇಂಡಿಯಾ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ.
 ವಿಜಯನಗರ ಜಿಲ್ಲೆಯಲ್ಲಿ ಒಬ್ಬರೇ ಉತ್ತೀರ್ಣರಾಗಿ ಜಿಲ್ಲೆಗೆ ಮತ್ತು ತಾಲೂಕಿಗೆ ಗರಿಮೆ ತಂದಿದ್ದು  ಸಂಪದ ಗೆ ತಂದೆ ತಾಯಿ ಚಿಕ್ಕಪ್ಪ ದೊಡ್ಡಪ್ಪ ಮತ್ತು ಅವರ ಕುಟುಂಬ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.