ಸಿಎಸ್ ಕೆಯಲ್ಲಿ ಸುರಕ್ಷಿತ ಭಾವನೆ ಮೂಡಿದೆ : ರಾಬಿನ್ ಉತ್ತಪ್ಪ

ದುಬೈ, ಅ.11-ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ ಎಂದು ರಾಬಿನ್ ಉತ್ತಪ್ಪ ಹೇಳಿದ್ದಾರೆ.
ನಿನ್ನೆ ನಡೆದ ಮೊದಲ ಅರ್ಹತಾ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಸಿಎಸ್ ಕೆ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. 44 ಎಸೆತಗಳನ್ನು ಎದುರಿಸಿದ ಉತ್ತಪ್ಪ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದ್ದರು.
ಈ ಗೆಲುವಿನ ನಂತರ ಪ್ರತಿಕ್ರಿಯೆ ನೀಡಿರುವ ಅವರು, ಚೆನ್ನೈಅತ್ಯಂತ ಸುರಕ್ಷಿತ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಎಂದು ನಾನು ನಂಬಿದ್ದೇನೆ. ಇಲ್ಲಿ ಎಲ್ಲರಲ್ಲೂ ಸುರಕ್ಷಿತ ಭಾವನೆ ಉಂಟು ಮಾಡಿದೆ. ಇದರಿಂದಲೇ ಫ್ರಾಂಚೈಸಿಗಾಗಿ ಆಟಗಾರರು ಹಿಂತಿರುಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಕೆಕೆಆರ್‌ನಲ್ಲಿ ಗೌತಮ್ ಗಂಭೀರ್ ಕ್ಯಾಪ್ಟನ್ ಆಗಿದ್ದಾಗ ನಾನು ತುಂಬಾ ಆನಂದಿಸಿದ್ದೇನೆ. ಅಲ್ಲಿ ನಿಜವಾಗಿಯೂ ಸುರಕ್ಷಿತವಾಗಿದ್ದೇನೆ ಎಂದು ಭಾವಿಸಿದ್ದೆ. ಆದರೆ ಕೆಕೆಆರ್ ಬಳಿಕ ಕ್ರಿಕೆಟ್ ಆಡುವಾಗ ಚೆನ್ನೈ ನಲ್ಲೂ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ ಎಂದರು.
ತಾವು ಕ್ರೀಸಿಗಿಳಿದಾಗ ಉತ್ತಮ ಆರಂಭದ ಅಗತ್ಯವಿದೆ ಎಂಬುದು ತಿಳಿದಿತ್ತು. ಹಾಗಾಗಿ ಚೆಂಡಿಗೆ ಅದರ ಅಗತ್ಯಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೆ ಎಂದರು.
ನಿನ್ನೆಯಷ್ಟೇ ನನ್ನ ಮಗನ ಹುಟ್ಟುಹಬ್ಬವಿಯತ್ತು ನಾನಿದನ್ನು ನನ್ನ ಮಗನಿಗೆ‌‌ ಅರ್ಪಿಸುತ್ತೇನೆ ಎಂದು ಉತ್ತಪ್ಪ ಹೇಳಿದರು.