ಸಿಎಸ್ ಕೆಗೆ 2 ವಿಕೆಟ್ ಗಳ ರೋಚಕ ಜಯ

ಅಬುಧಾಬಿ, ಸೆ.26- ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ ಜಯದ ನಾಗಲೋಟ ಮುಂದುವರೆಸಿದೆ.
ಇಂದು ನಡೆದ ಪಂದ್ಯದಲ್ಲಿ ಕೆಕೆಅರ್ ವಿರುದ್ಧ ಸಿಎಸ್ ಕೆ ಎರಡು ವಿಕೆಟ್ ಗಳಿಂದ ರೋಚಕ ಜಯಗಳಿಸಿತು.‌


20 ಓವರ್ ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಈ ಗೆಲುವಿನೊಂದಿಗೆ ಧೋನಿ ಪಡೆ 16 ಅಂಕಗಳಿಸಿ ಅಗ್ರಸ್ಥಾನಕ್ಕೇರಿದೆ. ಫಾಪ್ ಡೂಪ್ಲೆಸಿಸ್ 43, ಋತುರಾಜ್ ಗಾಯಕ್ವಾಡ್ 40, ಮೊಯಿನ್ ಅಲಿ 32 ರನ್ ಗಳಿಸಿದರು.ರೈನಾ ರನೌಟಾದ ಬಳಿಕ ಸಿಎಸ್ ಕೆ ಸೋಲಿನ ಸುಳಿಗೆ ಸಿಲುಕಿತ್ತು.
ಈ ವೇಳೆ ಆಡಲು ಬಂದ ರವೀಂದ್ರ ಜಡೇಜಾ ಎಂಟು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿ ಬಾರಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಈ ಹಂತದಲ್ಲಿ ಜಡೇಜಾ ಔಟಾದರು.
ಕೊನೆ ಎಸೆತದಲ್ಲಿ ದೀಪಕ್ ಚಹರ್ ಗೆಲುವಿಗೆ ಬೇಕಾಗಿದ್ದ ಒಂದು ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಕಡೇ ಗಳಿಗೆವರೆಗೂ ಕೆಕೆಆರ್ ನಡೆಸಿದ ಹೋರಾಟ ವಿಫಲವಾಯಿತು. ಪ್ತಸಿದ್ದ್ ಕೃಷ್ಣ ಬೌಲಿಂಗ್ ದುಬಾರಿಯೇ ಸೋಲಿಗೆ ಮುಳುವಾಯಿತು.
ಸುನಿಲ್ ನರೇನ್ ಮೂರು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತ ನೈಟ್ ರೈಡರ್ಸ್ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 171 ರನ್ ಗಳ ಸವಾಲಿನ ಮೊತ್ತ ದಾಖಲಿಸಿತು.
ಕೆಕೆಆರ್ ಪರ ರಾಹುಲ್ ತ್ರಿಪಾಠಿ 45,ನಿತೀಶ್ ರಾಣಾ ಅಜೇಯ 37, ದಿನೇಶ್ ಕಾರ್ತಿಕ್ 26 ಹಾಗೂ ಆಂಡ್ರೆ ರಸೆಲ್ 20 ರನ್ ಗಳಿಸಿದರು.
ಹೇಜಲ್ ವುಡ್, ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್ ಗಳಿಸಿದರೆ ಜಡೇಜಾ ಒಂದು ವಿಕೆಟ್ ಪಡೆದರು.