ಸಿಎಸ್ ಆರ್ ಕ್ಯಾಲೆಂಡರ್ ಬಿಡುಗಡೆ ಸಂಗಮೇಶ್ವರ ದೇವಸ್ಥಾನದ ಅಭಿವೃದ್ಧಿಗೆ 10 ಲಕ್ಷ ದೇಣಿಗೆ: ಸೂರ್ಯನಾರಾಯಣ ರೆಡ್ಡಿ

ಬಳ್ಳಾರಿ, ಡಿ.28: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ನಗರದ ಸಿ.ಎಸ್ ಆರ್ ಸಂಸ್ಥೆಯಿಂದ 2021 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಇಲ್ಲಿನ ಬಸವೇಶ್ವರ ನಗರದದ ಸಂಗಮೇಶ್ವರ ದೇವಸ್ಥಾನದಲ್ಲಿ ಇಂದು ನಡೆಯಿತು.
ಮಾಜಿ ಶಾಸಕ, ಕಾಂಗ್ರೆಸ್ ಪಕ್ಷದ ಮುಖಂಡ ನಾರಾ ಸೂರ್ಯ ನಾರಾಯಣರೆಡ್ಡಿ ಯವರು ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಸಂಗಮೇಶ್ವರ ದೇವಸ್ಥಾನದ ಅಭಿವೃದ್ದಿಗಾಗಿ 10 ಲಕ್ಷ‌ ರೂ ದೇಣಿಗೆ ನೀಡುವುದಾಗಿ ಹೇಳಿದರು.
ಸಿ.ಎಸ್.ಆರ್, ಸಂಸ್ಥೆಯು ಬಸವೇಶ್ವರ, ನೆಹರೂ ಕಾಲೋನಿ, ಸಿದ್ದಾರ್ಥ ಕಾಲೋನಿ, ಕೆ.ಇ.ಜಿ, ವಾರ್ಡ್, ರೇಣುಕಾಚಾರ್ಯ ನಗರಗಳಲ್ಲಿ ಕೋವಿಡ್-19 ಸಮಯದಲ್ಲಿ ಸ್ಯಾನಿಟೈಜರ್, ಮಾಸ್ಕ್ ಹಾಗೂ ಖಾಯಿಲೆ ಸಂಬಂಧಿಸಿದ ಆರ್ಯುವೇದಿಕ್ ಮಾತ್ರೆಗಳು, ದಿನಬಳಕೆ ಆಹಾರ ಧಾನ್ಯದ ಕಿಟ್‌ಗಳನ್ನು ಇಲ್ಲಿನ ಬಡಜನರಿಗೆ ವಿತರಿಸುವಲ್ಲಿ ಚಾನಾಳ್ ಶೇಖರ್ ಅವರು ತುಂಬಾ ಶ್ರಮವಹಿಸಿದ್ದಾರೆಂದರು.
ವೇದಿಕೆಯಲ್ಲಿ ಸಿ.ಎಸ್.ಆರ್ ನ ಸಂಸ್ಥಾಪಕ ಅಧ್ಯಕ್ಷ ಚಾನಾಳ್ ಶೇಖರ್, ಉಪಾಧ್ಯಕ್ಷೆ ಲತಾ ಚಾನಾಳ ಶೇಖರ್, ಸುಂಮಂಗಳಮ್ಮ, ಸಂಗಮೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಎಂ.ವಾಮದೇವ, ವೈ.ಡಿ.ಎಝಣ್ಣ, ಉಮಾಪತಿ ಶರ್ಮ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಕ್ಕಿ, ಮಹಾಲಿಂಗಯ್ಯ, ಜಾನೆಕುಂಟೆ ಬಸವರಾಜ್ ( ಕುಮ್ಮಿ), ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ಮಿಂಚೇರಿ ಬಾಬಣ್ಣ, ಕುಡುತಿನಿ ಶ್ರೀನಿವಾಸ, ಗಂಗಾವತಿ ವಿರೇಶ್, ದಿವಾಕರ್, ಗುರುಸಿದ್ದಣ್ಣ. ಮಹೇಶ್ ಸ್ವಾಮಿ, ಹುಬ್ಬಳ್ಳಿ ರಾಜು, ತೋಟದ ವಿರೇಶ್, ಶಶಿಕುಮಾರ್, ಹಿರಿಯ ನಾಗರೀಕ ವೇದಿಕೆಯ ಮುಖಂಡರು, ಶಿವಕುಮಾರ್, ಮಂಜು, ಅಶೋಕ್’ ಕೋರಿ, ಕೆ.ಇ.ಬಿ. ಶಿವು ಚಾನಾಳ್ ಮಲ್ಲಿಕಾರ್ಜು, ವಿರೇಶ್, ಕಗ್ಗಲ್ ಶಂಕರ್, ಶಿವಾರೆಡ್ಡಿ, ಆನಂದಗೌಡ ಇನ್ನಿತರರು ಉಪಸ್ಥಿತರಿದ್ದರು.