ಸಿಎಫ್ ಟಿಆರ್ ಐನಿಂದ ಮ್ಯಾರಾಥಾನ್

ಸಂಜೆವಾಣಿ ನ್ಯೂಸ್
ಮೈಸೂರು.ಡಿ.11: ನಗರದಲ್ಲಿ ಕಳೆದ ಮೂರು ದಿಗಳಿಂದ ನಾನಾ ರೀತಿಯಲ್ಲಿ ರಾಷ್ಟ್ರೀಯ ಆಹಾರ ಸಮ್ಮೇಳನವನ್ನು ನಡೆಸುತ್ತಿರುವ ಸಿಎಫ್ ಟಿಆರ್ ಐ ಭಾನುವಾರ ಮ್ಯಾರಥಾನ್ ನಡೆಸಿ ಗಮನ ಸೆಳೆಯಿತು.
ಬೆಳಿಗ್ಗೆ 300 ಕ್ಕೂ ಹೆಚ್ಚು ಮಂದಿ ಸಿಎಫ್ ಟಿಆರ್ ಐನ ದ್ವಾರದಿಂದ ಹೊರಟು ಮೆಟ್ರೋಪೆÇಲೊ ವೃತ್ತದ ಮೂಲಕ ಹುಣಸೂರು ರಸ್ತೆ ಮಾರ್ಗವಾಗಿ ಹೊರಟು ನಂತರ ಕಲಾಮಂದಿರದ ಸಮೀಪದ ದ್ವಾರದಿಂದ ಹಿಂದಿರುಗಿದರು.
ನವದೆಹಲಿಯ ಎಫ್ ಎಸ್ ಎಸ್ ಎಐನ ವಿಜ್ಞಾನ ಮತ್ತು ಮಾನದಂಡಗಳ ನಿರ್ದೇಶಕ
ಡಾ.ಅಮಿತ್ ಶರ್ಮಾ, ಬೆಂಗಳೂರು ಎಫ್ ಎಸ್ ಎಸ್ ಎಐನ ಸಹಾಯಕ ನಿರ್ದೇಶಕ ಕುಮರೇಶನ್, ಸಿಎಫ್ ಟಿಆರ್ ಐನ ನಿರ್ದೇಶಕರಾದ
ಡಾ.ಎನ್.ಭಾಸ್ಕರ್,ಡಾ.ಸುರೇಶ ಸಾಖರೆ, ಡಾ.ಎ.ಜಯದೀಪ್, ಡಾ.ನಿಲಾಬ್ ಸಿಂಗ್ ಸೇರಿ ಮೊದಲಾದ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಆಹಾರ ತಂತ್ರಜ್ಞಾನದ ಅರಿವು ಮೂಡಿಸುವ ಪ್ರಯತ್ನ ಮಾಡಿದರು.