ಸಿಎಂ ಸ್ಥಾನದ ಬಗ್ಗೆ ಮಾತಾಡುವುವವರು ಅನಾಗರಿಕರು: ಸಂಸದ ಎ.ನಾರಾಯಣಸ್ವಾಮಿ

ಚಿತ್ರದುರ್ಗ,ಜೂ.8: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಕೋವಿಡ್ ಸಂದರ್ಭದಲ್ಲಿ  ಯಾವುದೇ ಶಾಸಕ ಹಾಗೂ ಕಾರ್ಯಕರ್ತ ಸಿಎಂ ಬದಲಾವಣೆ ಬಗ್ಗೆ ಮಾತನಾಡುವುದು ಅನಾಗರೀಕತನ ಎಂದು ಸಂಸದ ಎ.ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.ನಗರದ ಸಮಾಜ ಕಲ್ಯಾಣ ಇಲಾಖೆ ಹತ್ತಿರ ಮಂಗಳಮುಖಿಯರಿಗೆ ಆಹಾರದ ಕಿಟ್ ವಿತರಣೆ ಮಾಡಿ ನಂತರ ಮಾತನಾಡಿದರು.ಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀರ್ಮಾನಿಸುವುದು ಹೈಕಮಾಂಡ್. ಅವರು ಎಲ್ಲವನ್ನೂ ಗಮನಿಸುತ್ತಿದ್ದು, ಈಗಾಗಲೇ ಎಲ್ಲರಿಗೂ ಸೂಚನೆಯನ್ನು ನೀಡಿದ್ದು, ಯಾರೂ ಕೂಡ ಸಿಎಂ ಬದಲಾವಣೆ ಬಗ್ಗೆ ಮಾತನಾಡಬಾರದೆಂದು ತಿಳಿಸಿದ್ದಾರೆ ಎಂದು ಹೇಳಿದರು.ಸಿಎಂ ಬದಲಾವಣೆ ಕುರಿತು ಯಾವಬ್ಬ ಶಾಸಕರು ಸಹಿ ಸಂಗ್ರಹ ಮಾಡಬಾರದು ಎಂದು ಪಕ್ಷದ  ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು  ಎಚ್ಚರಿಕೆ ನೀಡಿದ್ದು, ಸಿಎಂ ಬದಲಾವಣೆ ವಿಚಾರ ಕಾರ್ಯಕರ್ತರಲ್ಲಿ ಬರಬಾರದು ಎಂದು ಹೇಳಿದ್ದಾರೆ ಹಾಗಾಗಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದರು.ಸಿಎಂ ಬದಲಾವಣೆ ಕುರಿತು ಯಾರಾದರೂ ದೆಹಲಿಗೆ ಹೋಗಿಬಂದರೆ ಅದು ಅವರ ಹುಚ್ಚುತನ ಎಂದು ಸಚಿವ ಸಿ.ಪಿ.ಯೋಗೀಶ್ವರ್ ಹೆಸರನ್ನು ಹೇಳದೆ ಸಂಸದ ನಾರಾಯಣಸ್ವಾಮಿ ಟಾಂಗ್ ನೀಡಿದರು.ಪ್ರಸ್ತುತ ಎದ್ದಿರುವ ಸಿಎಂ ವಿಚಾರದ ಭಿನ್ನಮತ ಶಮನಿಸುವ ಗಂಡಸುತನ, ಎದೆಗಾರಿಕೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದ್ದು, ಕೆಲವೇ ದಿನಗಳಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ ಮುರುಳಿ, ಜಿ.ಪಂ.ಸದಸ್ಯ ಗುರುಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.