ಸಿಎಂ ಸ್ಥಾನಕ್ಕೆ ಬಿಎಸ್‌ವೈ ರಾಜೀನಾಮೆ ನೀಡಲು ಡಿಕೆಶಿ ಆಗ್ರಹ

ಮಸ್ಕಿ,ಏ.೧೫- ಮುಖ್ಯ ಮಂತ್ರಿ ಯಡಿಯೂರಪ್ಪ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮುದಗಲ್ ಪಟ್ಟಣದಲ್ಲಿ ಜಾತಿವಾರು ಮುಖಂಡರ ಸಭೆಗಳನ್ನು ನಡೆಸುವ ಮೂಲಕ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ ಯಡಿಯೂರಪ್ಪ ಸಿಎಂ. ಆಗಿ ಮುಂದು ವರೆಯಲು ನೈತಿಕತೆ ಇಲ್ಲ ತಕ್ಷಣ ರಾಜೀನಾಮೆ ನೀಡ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವು ಕುಮಾರ ಒತ್ತಾಯಿಸಿದರು.
ಪಟ್ಟಣದ ಬಸವೇಶ್ವರ ನಗರ ಬಳಿಯ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಮಾಧ್ಯಮ ಗೋಷ್ಟಿಯಲ್ಲಿ ಗುರುವಾರ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಸೋಲಿನ ಭೀತಿಯಲ್ಲಿರುವ ಕಾರಣ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಜಾತಿವಾರು ಮುಖಂಡರ ಸಭೆಗಳನ್ನು ನಡೆಸಿ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸಿದ್ದಾರೆ ವಿಜಯೇಂದ್ರ ಮುದಗಲ್ ಪಟ್ಟಣದಲ್ಲಿ ಠಿಕಾಣಿ ಹೂಡಿ ಬೆಂಬಲಿಗರ ಮೂಲಕ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ಬಿಜೆಪಿ ಮುಖಂಡರು ಆಡಳಿತ ಯಂತ್ರ ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರು ರಾಜ ರೋಷವಾಗಿ ಹಾದಿ ಬೀದಿಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದರೂ ಅಧಿಕಾರಿಗಳು ಮೌನ ವಾಗಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.
ತಾಲೂಕಿನ ಮಟ್ಟೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಎರಡು ಚೀಲ ಹಣ ತುಂಬಿ ಕೊಂಡು ಬಂದು ಮತದಾರರಿಗೆ ಹಣ ಹಂಚುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಒಂದು ಚೀಲ ವಶ ಪಡಿಸಿ ಕೊಂಡಿದ್ದಾರೆ ಮುದಗಲ್ ಪಿಎಸ್‌ಏ ಇನ್ನೂಂದು ಚೀಲ ಬಿಜೆಪಿ ಕಾರ್ಯ ಕರ್ತನ ಕೈಗೆ ಕೊಟ್ಟು ಕಳುಹಿಸಿದ್ದಾರೆ.
ಈ ದೃಶ್ಯಾವಳಿಗಳನ್ನು ಮೊಬೈಲ್ ಚಿತ್ರೀಕರಣ ಮಾಡಿದ ಕಾಂಗ್ರೆಸ್ ಕಾರ್ಯಕರ್ತನ ಮೊಬೈಲ್ ಕಸಿದು ಕೊಂಡು ಪಿಎಸ್‌ಏ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿ ಸಾಕ್ಷಿ ನಾಶ ಮಾಡಿರುವ ಮುದಗಲ್ ಪಿಎಸ್ ಏ ಅವರನ್ನು ತಕ್ಷಣ ಅಮಾನತು ಗೊಳಿಸ ಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಭಾಗದ ರೈತರ ಜೀವನಾಡಿ ೫ಎ. ಕಾಲುವೆ ಅನುಷ್ಟಾನಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು. ಸಾರಿಗೆ ನೌಕರರ ಗೋಳು ಕೇಳದ ಸರಕಾರ ರೈತರನ್ನು ಕಡೆಗಣಿಸುವತ್ತಿರುವ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಬೆಳಗಾವಿ, ಬಸವ ಕಲ್ಯಾಣ, ಮಸ್ಕಿ ಕ್ಷೇತ್ರದ ಉಪ ಚುನಾವಣೆಗಳಲ್ಲಿ ಜನ ವಿರೋಧಿ ಸರಕಾರಕ್ಕೆ ಮತದಾರರು ಬುದ್ದಿ ಕಲಿಸಲಿದ್ದಾರೆ ಎಂದು ಡಿಕೆಶಿ ಹೇಳಿದರು.
ಮಾಜಿ ಸಂಸದರಾದ ಧ್ರುವ ನಾರಯಣ, ವಿಎಸ್. ಉಗ್ರಪ್ಪ, ಎನ್ ಎಸ್ ಬೋಸರಾಜ, ವಸಂತ ಕುಮಾರ ಇನ್ನಿತರ ಮುಖಂಡರು ಇದ್ದರು.