ಸಿಎಂ ಸ್ಥಾನಕ್ಕೆ ಎಡಪ್ಪಾಡಿ ರಾಜೀನಾಮೆ

ಚೆನ್ನೈ,ಮೇ.೩- ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತರೂಢ ಎಐಡಿಎಂಕೆ ಪಕ್ಷ ಆಡಳಿತ ವಿರೋಧಿ ಅಲೆಗೆ ಸಿಕ್ಕಿ ತರಗೆಲೆಯಂತೆ ಆಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಎಡಪ್ಪಾಡಿ ಪಳನಿಸ್ವಾಮಿ ರಾಜೀನಾಮೆ ನೀಡಿದ್ದಾರೆ.

ತಮಿಳುನಾಡು ವಿಧಾನಸಭೆಗೆ ಹೆಸರು ಆರೋಗ್ಯಕರವಾದ ಮತಎಣಿಕೆ ನೆನ್ನೆ ನಡೆದಿತ್ತು. ೨೩೪ ಸದಸ್ಯಬಲದ ವಿಧಾನಸಭೆಯಲ್ಲಿ ಆಡಳಿತರೂಢ ಎಐಎಡಿಎಂಕೆ ಪಕ್ಷ ೭೭ ಸ್ಥಾನ ಹಾಗೂ ಪ್ರತಿಪಕ್ಷ ಡಿಎಂಕೆ ನೇತೃತ್ವದ ಮೈತ್ರಿ ಕೂಟ ೧೫೮ ಸ್ಥಾನಗಳನ್ನು ಗೆದ್ದುಕೊಂಡಿದೆ.

ತಮಿಳುನಾಡಿನಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯಬೇಕು ಎಂದು ಕನಸು ಕಾಣುತ್ತಿದ್ದ ಆಡಳಿತರೂಢ ಎಐಎಡಿಎಂಕೆ ಪಕ್ಷದ ಕನಸು ನುಚ್ಚುನೂರಾಗಿದೆ ಹೀಗಾಗಿ ಅನಿವಾರ್ಯವಾಗಿ ಎಡಪ್ಪಾಡಿ ಪಳನಿಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ

ಪಕ್ಷ ಬಹುಮತ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಭನ್ವರಿ ಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ಸ್ವೀಕರಿಸಿರುವ ರಾಜ್ಯಪಾಲ ಪುರೋಹಿತ್ ಅವರು ಮುಂದಿನ ಸರ್ಕಾರ ರಚನೆಯಾಗುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸೂಚನೆ ನೀಡಿದ್ದಾರೆ.

ಡಿಎಂಕೆ ನೇತೃತ್ವದ ಮೈತ್ರಿ ಕೋಟನೂರ ೧೫೮ ಸ್ಥಾನಗಳನ್ನು ಗೆದ್ದು ದಶಕದ ಬಳಿಕ ಅಧಿಕಾರ ಹಿಡಿಯಲು ಸಜ್ಜಾಗುತ್ತಿದೆ.

ಡಿಎಂಕೆ ಅನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಆಡಳಿತರೂಢ ಎಐಎಡಿಎಂಕೆ ಪಕ್ಷ ಮತ್ತು ಬಿಜೆಪಿ ನಾನಾ ಕಸರತ್ತು ನಡೆಸಿತ್ತು. ಆದರೆ ಅದ್ಯಾವುದೂ ಕೂಡ ಜನರ ಮುಂದೆ ಉಪಯೋಗಕ್ಕೆ ಬಂದಿಲ್ಲ