ಸಿಎಂ ಸಿದ್ದರಾಮಯ್ಯ ಬಾಯಿಂದಲೂ  ಶ್ರೀರಾಮ್ ಘೋಷಣೆ, ಇದು ಬಿಜೆಪಿ ಶಕ್ತಿ.

ಸಂಜೆವಾಣಿ ವಾರ್ತೆಕೂಡ್ಲಿಗಿ. ಫೆ.27 : – ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ   ಶ್ರೀರಾಮ್ ಘೋಷಣೆ ಕೂಗಿದ್ದಾರೆ, ಅದಕ್ಕೆ ಕಾರಣ ಬಿಜೆಪಿಯ ಶಕ್ತಿ  ಎಂದು ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್ ತಿಳಿಸಿದರು.ಅವರು ತಾಲೂಕಿನ ಕಾನಾ ಹೊಸಹಳ್ಳಿ ಗ್ರಾಮದ  ಧ್ವಾರ ಬಾಗಿಲ ಬಳಿ ಭಾರತೀಯ ಜನತಾ ಪಾರ್ಟಿಯ ಹೊಸಹಳ್ಳಿ ಶಕ್ತಿಕೇಂದ್ರದಿಂದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ ಲಕ್ಷಾಂತರ ಜ‌ನರ ಪ್ರಾಣ ತ್ಯಾಗ ಮಾಡಿದ್ದಾರೆ,  ಒಂದೇ  ತಿಂಗಳಲ್ಲಿ ಇಪ್ಪತೈದು ಕೋಟಿ ರೂ. ಸಂಗ್ರಹವಾಗಿದೆ ಎಂದ ಅವರು, ನರೇಂದ್ರ ಮೋದಿಜಿಯವರ ನೇತೃತ್ವದ ಬಿಜೆಪಿ ಆಡಳಿತದಿಂದಾಗಿ ಕಾಶ್ಮೀರದಲ್ಲಿ ಇಂದು  ರಾಜರೋಶವಾಗಿ ಓಡಾಡುವಂತಾಗಿದೆ ಎಂದರು.ದೇಶದದ್ಯಾಂತ 500ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳ ಶಿಲನ್ಯಾಸ ಕಾರ್ಯಕ್ರಮವು ಶೀಘ್ರದಲ್ಲಿಯೇ ನಡೆಯಲಿದೆ, ಹೆದ್ದಾರಿ ಯೋಜನೆ ಸೇರಿದಂತೆ, ಗ್ಯಾಸ್ ಸೌಲಭ್ಯ ಹಾಗೂ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ.ರೈತರ ಖಾತೆಗೆ ನೇರವಾಗಿ 6ಸಾವಿರ ರೂ.ನೇರ ಜಮಾ ಆಗುತ್ತಿದ್ದು, ರಾಜ್ಯ ಸರ್ಕಾರದ ಎಡವಟ್ಟಿನಿಂದ ನಾಲ್ಕು ಸಾವಿರ ಕಟ್ ಆಗಿದೆ ಎಂದರು‌.ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಾಜಿ‌ ಶಾಸಕ ಅಮರನಾಥ್ ,  ರೈತ ಮೋರ್ಚಾ  ಜಿಲ್ಲಾಧ್ಯಕ್ಷ ಎಚ್.ರೇವಣ್ಣ, ಮಂಡಲ  ಅಧ್ಯಕ್ಷ ಕೆ.ಎನ್. ರಾಜು ಬಣವಿಕಲ್ಲು, ಮಹಿಳಾ ಮಂಡಲಾಧ್ಯಕ್ಷೆ ಶಾರದ ಕುಂಬಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಮಲ್ಲಿಕಾರ್ಜುನ, ಶಿಲ್ಪಾ ಬಸವರಾಜ್, ಗೀತಾ, ಸಣ್ಣ ಬಾಲಪ್ಪ,  ಬೆಳ್ಳಕಟ್ಟೆ ಕಲ್ಲೇಶಪ್ಪ, ಹಾರಕಭಾವಿ ಕೊಟ್ರೇಶ್,  ಆಲೂರು ಕೆ.ಟಿ.ಮಲ್ಲಿಕಾರ್ಜುನ, ಜಯರಾಜ್  ಅಮಲಾಪುರ ಸುದರ್ಶನ ಸೇರಿದಂತೆ  ಇತರರಿದ್ದರು.