
ಸಮೀಕ್ಷೆಯಲ್ಲಿ ಬಹಿರಂಗ
ನವದೆಹಲಿ,ಮೇ.೩- ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಈ ನಡುವೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ನಡೆಸಿದ ಸಮೀಕ್ಷೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.ಮೇ ೧೦ ರಂದು ನಡೆಯಲಿರುವ ರಾಜ್ಯ ಚುನಾವಣೆ ಮತ್ತು ಮೂರು ದಿನಗಳ ನಂತರ ಜನರ ತೀರ್ಪಿಗೆ ಮುನ್ನ ನಡೆದ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಅತ್ಯಂತ ಜನಪ್ರಿಯ ವ್ಯಕ್ತಿ ಅವರು ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ಎಂದು ರಾಜ್ಯದ ಎಲ್ಲಾ ವಯೋಮಾನದ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಲೋಕನೀತಿ-ಸೆಂಟರ್ ಫಾರ್ ದಿ ಡೆವಲಪಿಂಗ್ ಸೊಸೈಟಿಗಳ ಸಹಭಾಗಿತ್ವದಲ್ಲಿ ನಡೆಸಿದ “ಸಾರ್ವಜನಿಕ ಅಭಿಪ್ರಾಯ” ವನ್ನು ಬಹಿರಂಗಪಡಿಸಿದೆ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ.ಬಿಜೆಪಿಯ ಬಸವರಾಜ್ ಬೊಮ್ಮಾಯಿ ಎರಡನೇ ಸ್ಥಾನ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮೂರನೇ ಸ್ಥಾನದಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಲ್ಕನೇ ಸ್ಥಾನ, ಐದು ವರ್ಷದ ಅವಧಿಯನ್ನು ಒಮ್ಮೆಯೂ ಪೂರ್ಣಗೊಳಿಸದ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಬಿ,ಎಸ್ ಯಡಿಯೂರಪ್ಪ ಐದನೇ ಸ್ಥಾನದಲ್ಲಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಮತದಾರರಲ್ಲಿ ಸ್ವಲ್ಪ ಹೆಚ್ಚು ಜನಪ್ರಿಯರಾಗಿದ್ದಾರೆ, ಆದರೆ ಕಿರಿಯ ಮತದಾರರಲ್ಲಿ ಬೊಮ್ಮಾಯಿ ಅವರಿಗೆ ಕಿರಿಯ ಮತದಾರರು ಆದ್ಯತೆ ನೀಡುತ್ತಾರೆ ಎಂದು ಸಮೀಕ್ಷೆ ಬಹಿರಂಗಪಡಿಸುತ್ತದೆ.ಭ್ರಷ್ಟಾಚಾರದ ಆರೋಪಗಳ ನಡುವೆ ೨೦೨೧ ರಲ್ಲಿ ಬೊಮ್ಮಾಯಿ ಅವರನ್ನು ಬಿಜೆಪಿ ಬದಲಿಸುವವರೆಗೂ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.ಜನರು ಮತ ಚಲಾಯಿಸುವಾಗ ಮುಖ್ಯಮಂತ್ರಿ ಅಭ್ಯರ್ಥಿ ಎಷ್ಟು ಮುಖ್ಯ ,ಪಕ್ಷವಲ್ಲ ಎನ್ನುವ ವಿಷಯ ಬಹಿರಂಗ ಪಡಿಸಿದೆ.ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಶೇ.೫೬ ರಷ್ಟು ಮಂದಿ ಪಕ್ಷಕ್ಕೆ ಮತ್ತು ಶೇ.೩೮ ರಷ್ಟು ಮಂದಿ ಅಭ್ಯರ್ಥಿಗೆ ಶೇ.೪ರಷ್ಟು ಮಂದಿ ಮಾತ್ರ ಮುಖ್ಯಮಂತ್ರಿ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿದ್ದಾರೆ.ಕಾಂಗ್ರೆಸ್ ಅಥವಾ ಜೆಡಿಎಸ್ ಬೆಂಬಲಿಸುವ ಮತದಾರರು ಹೆಚ್ಚಾಗಿ ಪಕ್ಷವನ್ನು ದೊಡ್ಡ ಅಂಶವೆಂದು ಪರಿಗಣಿಸುತ್ತಾರೆ. ಆದರೆ ಬಿಜೆಪಿ ಮತದಾರರು ಭಿನ್ನಾಭಿಪ್ರಾಯ ಹೊಂದಿದ್ದಾರೆ.
ಸಮೀಕ್ಷೆಯಲ್ಲಿಯೂ ಕಾಂಗ್ರೆಸ್ ಮುಂದು
ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ನಡೆಸಿದ ಸಮೀಕ್ಷೆಯಲ್ಲಿ ಬಹುತೇಕರು ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿದ್ದಾರೆ.
ಅಧಿಕಾರದಲ್ಲಿರುವ ಬಿಜೆಪಿಗೆ ಆಡಳಿತ ವಿರೋಧ ಅಲೆ ಇರುವುದು ಸ್ಪಷ್ಟವಾಗಿ ಗೋಚರಿಸಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಬಿಜೆಪಿ ಮುಂದು
ರಾಜ್ಯದಲ್ಲಿ ಸರ್ಕಾರ ನಡೆಸಿದವ ಪೈಕಿ ಹೆಚ್ಚು ಭ್ರಷ್ಟಾಚಾರ ನಡೆಸಿದವ ಪಕ್ಷಗಳಲ್ಲಿ ಬಿಜೆಪಿ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಸಮೀಕ್ಷೆಯ ಈ ಮಾಹಿತಿ ಹೊರ ಹಾಕಿದೆ.ಭ್ರಷ್ಟಾಚಾರದಲ್ಲಿ ಬಿಜೆಪಿ ಶೇ.೫೯ ರಷ್ಟು ಮುಂದಿದೆ. ನಂತರದಲ್ಲಿ ಕಾಂಗ್ರೆಸ್ ಶೇ. ೩೫ ಮತ್ತು ಜೆಡಿಎಸ್ ಶೇ. ೩ಕ್ಕಿಂತ ಕಡಿಮೆ ಇದೆ.ಕುಟುಂಬ ರಾಜಕಾರಣಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಶೇ. ೩೦ ಮತ್ತು ಜೆಡಿಎಸ್ ಶೇ. ೮ ರಷ್ಟು ಪಾಲು ಹೊಂದಿದೆ ಎಂದು ಸಮೀಕ್ಷೆಯಲ್ಲಿ ಈ ವಿಷಯ ಹೊರ ಹಾಕಿದೆ.