ಸಿಎಂ ರವರು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ – ಬೋಸರಾಜು

ಮಾನ್ವಿ.ಡಿ. ೦೫- ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಭೇದ ತೊರೆದು ಚುನಾವಣೆ ಮಾಡಬೇಕು ಆದರೆ ಇಡೀ ರಾಜ್ಯಕ್ಕೆ ಮಾರ್ಗದರ್ಶನ ನೀಡುವ ಸಿಎಂ ಯಡಿಯೂರಪ್ಪನವರೇ ಪಕ್ಷ ಬೆಂಬಲಿತವಾಗಿ ಸ್ಪರ್ಧೆ ಮಾಡಿ ಸದಸ್ಯರು ಆಯ್ಕೆಯಾಗಬೇಕೆಂದು ಹೇಳಿರುವುದು ಕಾನೂನು ವಿರುದ್ಧವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್ ಬೋಸರಾಜ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯ ದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರಸ್ ಸಮಿತಿ ವತಿಯಿಂದ ನೂತನ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಗ್ರಾ.ಪಂ ಚುನಾವಣೆಯಲ್ಲಿ ಮಾನ್ವಿ ತಾಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಿರಿ. ಇನ್ನೂ ಕೆಲವೆ ದಿನಗಳಲ್ಲಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗುತ್ತೇ ಎಲ್ಲ ಸದಸ್ಯರು ಸಿದ್ದತೆ ಮಾಡಿಕೊಂಡು. ಆಯಾ ತಾ.ಪಂ, ಜಿ.ಪಂ ಹಾಗೂ ಹಿರಿಯ ಮುಖಂಡರಿಗೆ ಯಾರನ್ನು ಮಾಡಬೇಕು ಎನ್ನುವುದು ಹಿರಿಯರ ಸಮ್ಮೂಖದಲ್ಲಿ ನಿರ್ಧಾರ ಮಾಡಲಾಗಿದೆ. ಮುಂದೆ ಅಧಿಕಾರವನ್ನು ವಹಿಸಿಕೊಂಡು ಪ್ರತಿಯೊಬ್ಬರು ಗ್ರಾಮ ಅಭಿವೃದ್ದಿಗೆ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.
ನಂತರ ಜಿ.ಪಂ ಮಾಜಿ ಅಧ್ಯಕ್ಷ ದೊಡ್ಡಬಸ್ಸಪ್ಪ ಗೌಡ ಭೋಗವತಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ರಾಜಾ ವಸಂತ ನಾಯಕ, ಪಿ. ತಿಪ್ಪಣ್ಣ ಬಾಗಲವಾಡ, ಮಾತನಾಡಿದರು.
ಈ ವೇದಿಕೆ ಮೇಲೆ ಜಿ.ಪಂ ಸದಸ್ಯ ಕಿರಿಲಿಂಗಪ್ಪ, ವೀರಭದ್ರಗೌಡ ಭೋಗವತಿ, ರವಿ ಬೋಸರಾಜು, ಶರಣಯ್ಯ ಕೆ. ಗುಡದಿನ್ನಿ, ರಾಜಾ ವಸಂತ ನಾಯಕ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಶಿವಶಂಕರಗೌಡ, ತಾ.ಪಂ ಉಪಾಧ್ಯಕ್ಷ ಚನ್ನಬಸ್ಸಪ್ಪ ಗೌಡ ಬೆಟ್ಟದೂರು, ಬಿ.ಕೆ ಅಮರೇಶಪ್ಪ ವಕೀಲರು, ನಜೀರುದ್ದೀನ್ ಖಾದ್ರಿ, ರೌಡುರೂ ಸ್ವಾಮಿ, ಅದಮ್ ಬೇಗ್, ಬಸನಗೌಡ ಮಾಲೀ ಪಾಟೀಲ್ ಕೊಟ್ನೆಕಲ್, ಎಸ್ ಎಂ ಪಾಟೀಲ್, ಕರಿಯಪ್ಪ ಕಪಗಲ್, ಮುಸ್ತಾಫ್ ಕಪಗಲ್, ಗೋವಿಂದರಾಜು ವಕೀಲರು, ಶ್ರೀ ಶೈಲಗೌಡ ತಡಕಲ.ವಸಂತ ಕೊಡ್ಲಿ, ರಾಮನಗೌಡ ಉಟಕನೂರು, ಎಚ್‌ಎಂಟಿ ಮಲ್ಲಯ್ಯ ಉಟಕನೂರು, ಶಿವಪುತ್ರಪ್ಪ ಉಟಕನೂರು,ಅಯ್ಯಪ್ಪ ಉದ್ಬಾಳ ಸೇರಿದಂತೆ ನೂತನ ಸದಸ್ಯರುಗಳಿದ್ದರು.