ಸಿಎಂ ಯಾರೆಂಬುದು ಮುಖ್ಯ ಅಲ್ಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು:ಅಲ್ಲಂ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.26: ನಮಗೆ ಮುಖ್ಯ ಮಂತ್ರಿ ಯಾರೆಂಬುದು ಮುಖ್ಯ ಅಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹೇಳಿದರು.
ಅವರು ಇಂದು ನಗರದ ಎಂ.ಆರ್.ಕೆ. ಪಂಕ್ಷನ್ ಹಾಲ್ ನಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ 75 ನೇ ವರ್ಷದ ಜನ್ಮ ದಿನದ ಅಂಗವಾಗಿ ದಾವಣಗೆರೆಯಲ್ಲಿ ಅ 3 ರಂದು ಹಮ್ಮಿಕೊಂಡಿರುವ ಅಮೃತ ಮಹೋತ್ಸವ ಕಾರ್ಯಕ್ರಮದ ಪುರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪಕ್ಷವೇ ಸಿದ್ದರಾಮಯ್ಯ ಅವರ ಜನ್ಮ ದಿನವನ್ನಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮ ಒಂದು ರೀತಿ ಬರುವ ಚುನಾವಣೆಗೆ ಸಂಘಟನಾತ್ಮಕತೆಯ ದಿಕ್ಸೂಚಿಯಾಗಿದೆಂದರು.
ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಕೆ.ಎರ್ರೆಗೌಡ ಮಾತನಾಡಿ, ಅಕ್ರಮ ಗಣಿಗಾರಿಕೆ ವಿರುದ್ದ ತೊಡೆತಟ್ಟಿ. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಸಾಮಾಜಿಕ ನ್ಯಾಯದಡಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ 75 ನೇ ಜನ್ಮ ದಿನವನ್ನು ಸಂಭ್ರಮಾಚರಣೆಯಿಂದ ಆಚರಿಸಲು ನಾವೆಲ್ಲ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೋಗೋಣ ಎಂದರು.
ಮುಂಡ್ರಿಗಿ ನಾಗರಾಜ್ ಮಾತನಾಡಿ, ರಾಜ್ಯ ಅಭಿವೃದ್ಧಿ ಕಂಡಿದ್ದರೆ ಅದು ಸಿದ್ದರಾಮಯ್ಯ ಅವರ ಆಡಳಿತದಲ್ಲಿ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಂದ ಎಸ್ಸಿ ಎಸ್ಟಿ ಸಮುದಾಯಕ್ಕೆ 2014 ರಲ್ಲಿ 27 ಸಾವಿರ ಕೋಟಿ ಮೀಸಲಿಟ್ಟಿದ್ದನ್ನು ನಾವೆಲ್ಲ ಮರೆಯುವಂತಿಲ್ಲ. ಅಂತಹ ಧೀಂಮತ ನಾಯಕನ ಜನ್ಮ ದಿನವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸೋಣ ಎಂದರು.
ಮುಖಂಡರಾದ ಮಾಜಿ ಶಾಸಕ ಬಿ.ಎಂ.ನಾಗರಾಜ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಎ.ಮಾನಯ್ಯ, ಎಲ್.ಮಾರೆಣ್ಣ, ಎಂ. ಹನುಮಕಿಶೋರ್, ಅಲ್ಲಂ ಪ್ರಶಾಂತ, ರಾವೂರು ಸುನೀಲ್, ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಂಜುಳ, ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಮುಲ್ಲಂಗಿ ನಂದೀಶ್, ವಿವೇಕ್ (ವಿಕ್ಕಿ), ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ ಹೆಗಡೆ, ಶಿವರಾಜ್ ಹೆಗಡೆ, ಸದಾಶಿವಪ್ಪ ಮೊದಲಾದವರು ಮಾತನಾಡಿದರು.

ಬಳ್ಳಾರಿಗರ ಶಕ್ತಿ ಪ್ರದರ್ಶನ ಆಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಳ್ಳಾರಿ ಜನರ ಶಕ್ತಿ ಪ್ರದರ್ಶನ ತೋರಿಸೋಣ ಅದಕ್ಕಾಗಿ ಮುಖಂಡರು ತಲಾ 20 ಬಸ್ ಮಾಡಿಕೊಂಡು ಅಭಿಮಾನಿಗಳನ್ನು ಕರೆ ತರಬೇಕು ಎಂದರು. ಇಲ್ಲಿಂದ ಜನರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದಷ್ಟೇ ಅಲ್ಲ ಎಲ್ಲ ಮುಖಂಡರಾದ್ದಾಗಿದೆಂದರು. ಜಿಲ್ಲೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಹೋಗೋಣ ಎಂದರು. ಆ 3 ರಂದು ದಾವಣಗೆರೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದ ಅವರು. ಸಿಎಂ ಸ್ಥಾನಕ್ಕೆ ಡಿಕೆಸಿ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಜಗಳ ಎಂಬುದು ಮಾಧ್ಯಮಗಳ ಸ್ಪಷ್ಟಿ, ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಯಾರೆಂದು ಪಕ್ಷದ ಹೈಕಮಾಂಡ. ತೀರ್ಮಾನ ಮಾಡಲಿದೆ. ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದರು.

ಮುಂದಿನ ಮಂತ್ರಿ:
ಈ ಸಭೆಯಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ನಾರಾ ಭರತ್ ರೆಡ್ಡಿ. ಗ್ರಾಮೀಣ ಶಾಸಕ ಮುಂದಿನ ಮಂತ್ರಿ ಎಂದು ಹೇಳುವ ಮೂಲಕ ಸಭೆಯಲ್ಲಿ ಗಮನ ಸೆಳೆದರು.
ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮವು ಮುಂಬರುವ ವಿಧಾನ ಸಭಾ ಚುನಾವಣೆಯ
ಗೆಲುವಿನ ವಿಜಯೋತ್ಸ ಎನ್ನೋಣ, ದೇಶದಲ್ಲಿ ಓಡಾಡುವ ಬಿಜೆಪಿಯ ಅಶ್ವ ಮೇದದ ಕುದುರೆಯನ್ನು ನಾವು ಕರ್ನಾಟಕದ ಜನತೆ ಕಟ್ಟೋಣ ಎಂದರು.