ಸಿಎಂ ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಚುನಾವಣೆಃ ಸಚಿವೆ ಜೊಲ್ಲೆ

ವಿಜಯಪುರ, ಜೂ.10-ಸಿಎಂ ಬಿಎಸ್‍ವೈ ಅಧಿಕಾರ ವಹಿಸಿಕೊಂಡ ಮೇಲೆ ಪ್ರವಾಹ, ಕೊರೊನಾದಂತ ಸಂಕಷ್ಟ ಬಂದಿವೆ. ಅದನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟ ಪಡಿಸಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದ ಬದಲಾವಣೆ ಕೇವಲ ಊಹಾಪೆÇೀಹ ಅಷ್ಟೇ. ಸಿಎಂ ಬಿಎಸ್. ವೈ ಅಧಿಕಾರ ವಹಿಸಿಕೊಂಡ ಮೇಲೆ ಪ್ರವಾಹ, ಕೊರೊನಾದಂತ ಸಂಕಷ್ಟ ಬಂದಿವೆ. ಅದನ್ನು ಸಮರ್ಥವಾಗಿ ಎದುರಿಸಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಆದರೆ ಕೆಲವರು ಸುಮ್ಮನೆ ಸುದ್ದಿ ಹರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಥ ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಸಮಯದಲ್ಲಿ ಹೈಕಮಾಂಡ್ ಕ್ರಮ ಕೈಗೊಳ್ಳಲಿದೆ. ಇಂಥ ಸುದ್ದಿ ಹರಡಿಸುವವರು ಯಾರು ಎಂಬುದು ಗೊತ್ತಿದೆ. ಅದು ಹೈಕಮಾಂಡ್‍ಗೂ ಗೊತ್ತು. ಶೀಘ್ರ ಅಂಥವರ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಯತ್ನಾಳ ವಿರುದ್ಧ ಪ್ರತಿಕ್ರಿಯೆಗೆ ನಕಾರಃ ಸಿಎಂ ವಿರುದ್ಧ ಮಾತನಾಡುವ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ, ಇನ್ನು ಚಿಕ್ಕವಳು ಎನ್ನುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡದೆ ಸುಮ್ಮನಾದರು.

ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಪ್ರಶ್ನೆಯೇ ಇಲ್ಲಃ ಸಚಿವೆ ಜೊಲ್ಲೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬದಲಾವಣೆ ಪ್ರಶ್ನೆಯೇ ಇಲ್ಲ. ಇದೊಂದು ಉಹಾಪೆÇೀಹ ಅಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪನವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಬರಗಾಲ, ಪ್ರವಾಹ, ಎರಡು ಬಾರಿ ಕೋವಿಡ್ ಪರಿಸ್ಥಿತಿ ಬಂತು. ಇದೆಲ್ಲವನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.
ಮುಂದೆ ಬರುವ ಚುನಾವಣೆಯನ್ನು ಸಹಿತ ನಾವು ಅವರ ನೇತೃತ್ವದಲ್ಲೇ ಎದುರಿಸುತ್ತೇವೆ. ಇದೆಲ್ಲವೂ ಗಾಳಿ ಮಾತು, ಇದೆಲ್ಲದಕ್ಕೂ ಕಿವಿ ಗೊಡಬಾರದು ಎಂದರು.
ವದಂತಿಗಳನ್ನು ಮಾಡುವವರು ಅನೇಕ ಜನ ಇರುತ್ತಾರೆ, ವದಂತಿಗಳೆಲ್ಲ ನಿಜ ಇರುವುದಿಲ್ಲ. ಅವರು ಯಾರು ಏನು ಎಂಬುದು ನಾನು ಉಲ್ಲೇಖ ಮಾಡುವುದಿಲ್ಲ, ಏನೇ ಇದ್ದರೂ ಸಿಎಂ ಅವರು ಉತ್ತಮ ಆಡಳಿತ ಕೊಟ್ಟಿದ್ದಾರೆ ಯಾವುದೇ ತೊಂದರೆ ಆಗಲ್ಲ ಎಂದರು.
ಸಿಎಂ ಬದಲಾವಣೆ ಕುರಿತು ಯತ್ನಾಳ ಹೇಳಿಕೆ ವಿಚಾರಕ್ಕೆ, ಯತ್ನಾಳ ಹೆಸರು ಬಳಸದೇ ಪ್ರತಿಕ್ರಿಯೆ ನೀಡಿ, ಯಾರು ಏನೋ, ಅವರ ಮನಸ್ಸಿಗೆ ತಿಳಿಯುತ್ತದೆ ಹಾಗೆ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೈ ಕಮಾಂಡ್ ಇದೆಲ್ಲವನ್ನು ಗಮನಿಸುತ್ತಿದೆ. ಕೋವಿಡ್ ನಂತಹ ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಹೇಳಿಕೆ ಕೊಡಬಾರದು ಎಂದರು.
ಸಿಎಂ ಅವರ ಕುರಿತು ಹೇಳಿಕೆ ಕೊಡುವವರ ಬಗ್ಗೆ ನಾನು ಮಾತನಾಡಲ್ಲ. ನಾನು ಇನ್ನೂ ಬಹಳ ಚಿಕ್ಕವಳು ಎಂದರು.